ದೇವರ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಯಾವತ್ತೂ ಈ ತಪ್ಪನ್ನು ಮಾಡಬಾರದು. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ಕೆಲವರಿಗೆ ವಿಧಿವಿಧಾನಗಳ ಬಗ್ಗೆ ಅರಿವು ಎನ್ನುವುದು ಇರುವುದಿಲ್ಲ. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ವಸ್ತುಗಳ ಬಗ್ಗೆ ತಿಳುವಳಿಕೆ ಕೂಡ ಇರುವುದಿಲ್ಲ. ದೇವರ ಮನೆಯಲ್ಲಿ ಪಂಡಿತೋತ್ತಮರು ಹೇಳುವ ಪ್ರಕಾರ ಒಂದು ಫೋಟೋವನ್ನು ಇಡಬೇಕು ಎಂದರೆ ಅದರೆ ಆದ ಪ್ರಮುಖ್ಯತೆಯನ್ನು ಹೊಂದಿರುತ್ತದೆ.
ದೇವರ ಮನೆಯಲ್ಲಿ ಫೋಟೋ ಇಡುವುದಾದರೆ ಅದರ ಬಗ್ಗೆ ವಿಶೇಷತೆಯನ್ನು ತಿಳಿದುಕೊಂಡು ಇಡಬೇಕು. ತಪ್ಪನ್ನು ಮಾಡಿದರೆ ಮನೆಯಲ್ಲಿ ಸಮಸ್ಯೆ ಆಗುತ್ತಿರುತ್ತದೆ.ಮನೆಯಲ್ಲಿ ಏಳಿಗೆ ಅನ್ನುವುದು ಆಗುವುದಿಲ್ಲ. ಮನೆಯಲ್ಲಿ ದೇವರ ವಿಗ್ರಹಗಳು ಮೂರು ಇಂಚಿಗಿಂತ ಜಾಸ್ತಿ ಇರಬಾರದು.ಒಂದು ವೇಳೆ ಇದ್ದರೆ ವಿಶೇಷ ಪೂಜೆಗಳನ್ನು ಮಾಡಬೇಕಾಗುತ್ತದೆ. ವಿಶೇಷ ನೈವೇದ್ಯ, ದಂಪತಿಗಳು ತಾಂಬೂಲ ದಾನ ಮಾಡಬೇಕಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.
ಇನ್ನು ದೇವರ ಮನೆಯಲ್ಲಿ ಮೂರು ಇಂಚಿಗಿಂತ ಆರು ಇಂಚಿನ ದೀಪಗಳನ್ನು ಅಚ್ಚಿದರೆ ಬಲು ಶ್ರೇಷ್ಠ. ಇದರಿಂದ ಕುಲದೇವತೆ ಶಾಪ, ದೋಷಗಳು ನಿವಾರಣೆಯಾಗುತ್ತದೆ. ಇನ್ನು ದೇವರ ವಿಗ್ರಹಗಳನ್ನು ನೆಲದ ಮೇಲೆ ಯಾವುದೇ ಕಾರಣಕ್ಕೂ ಇಡಬಾರದು. ರಂಗೋಲಿಯ ಮೇಲೆ ಒಂದು ಮಣೆಯನ್ನು ಹಾಕಿ ಇಡಬೇಕು.ಇನ್ನು ಒಡೆದು ಹೋಗಿರುವ ವಿಗ್ರಹ, ಫೋಟೋ, ನೈವೇದ್ಯ, ವಿಧಿ-ವಿಧಾನಗಳನ್ನು ತಿಳಿದು ವಿಸರ್ಜನೆ ಮಾಡಬೇಕು.
ಯಾವುದೇ ದೇವರ ಹಳೆಯ ವಿಭಿನ್ನವಾಗಿರುವ ಫೋಟೋವನ್ನು ದೇವಾಲಯಕ್ಕೆ ಕೊಡಬಾರದು. ದೇವರ ಎದುರಿಗೆ ಮುಖಮಾಡಿ ಕುಳಿತು ಪೂಜೆ ಮಾಡುವುದಕ್ಕಿಂತ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಪೂಜಿಸಿದರೆ ಶುಭಫಲ. ಇನ್ನು ದೇವರಿಗೆ ಕಾಯಿಸಿದ ಹಾಲು, ವಾಸನೆ ನೋಡಿದ ಪುಷ್ಪ ಹಣ್ಣು, ನೆಲಕ್ಕೆ ಬಿದ್ದ ತುಳಸಿ ಶುಚಿ ಇರದ ಗರಿಕೆ,3 ದಳ ಬಿಲ್ವಪತ್ರೆಯನ್ನು ಯಾವತ್ತಿಗೂ ಕೂಡ ಅಪ್ಪಿತಪ್ಪಿಯೂ ಅರ್ಪಿಸಬಾರದು.
ದೇವರ ಮನೆಯಲ್ಲಿ ವಿಗ್ರಹಗಳು, ದೀಪಗಳು, ದೀಪಕ್ಕೆ ಬಳಸುವ ಎಣ್ಣೆ, ಪಂಚಪಾತ್ರೆ ಹಾಗೂ ದೇವರ ಸಾಮಾಗ್ರಿಗಳು ಎಷ್ಟು ಶುದ್ಧಿ ಆಗಿರುತ್ತದೆಯೋ ಅಷ್ಟು ವೃದ್ಧಿ ಆಗುತ್ತದೆ. ದೇವರ ಪೂಜೆ ಮಾಡುವಾಗ ಆಕಳಿಸಿ ಕೊಂಡು ಪೂಜೆ ಮಾಡುವುದು, ಮನಸ್ಸಿಲ್ಲದೆ ಬೇಜಾರಿನಿಂದ ಪೂಜೆ ಮಾಡುವುದು, ಕೋಪಗೊಂಡು ಪೂಜೆ ಮಾಡುವುದು ಮನೆಗೆ ಶ್ರೇಷ್ಠವಲ್ಲ. ಇದನ್ನು ಆಲಸಿ ಪೂಜೆಯೆಂದು ಕರೆಯುತ್ತಾರೆ. ಆದ್ದರಿಂದ ಪೂಜೆ ಮಾಡುವ ಸಂದರ್ಭದಲ್ಲಿ ಭಕ್ತಿಯಿಂದ, ಶ್ರದ್ಧೆಯಿಂದ ಪೂಜೆ ಮಾಡಿದರೆ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ. ಪೂಜೆ ಮಾಡುವ ಸಂದರ್ಭದಲ್ಲಿ ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ರೀತಿಯ ತಪ್ಪುಗಳನ್ನು ಮಾಡಿದರೆ ಸಾಕಷ್ಟು ನಷ್ಟಕ್ಕೆ ಒಳಗಾಗುತ್ತೀರ. ಹಲವಾರು ಸಮಸ್ಯೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.