ನಮಸ್ಕಾರ ಸ್ನೇಹಿತರೇ, ತಿರುಮಲೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ನೀವು ಎಷ್ಟು ಸಲ ಮಾಡಿದ್ದೀರ ಸುಮಾರು ಸಲ ಮಾಡಿರಬಹುದು ಅಲ್ವಾ ಆದರೂ ವೆಂಕಟೇಶ್ವರ ಸ್ವಾಮಿಯನ್ನು ನೋಡಬೇಕು ಎಂದರೆ ಕೆಲವು ನಿಯಮಗಳನ್ನು ಪಾಲಿಸಬೇಕು ನೀವು ಅದನ್ನು ಹಾಗೆನೇ ಮಾಡಿದ್ದೀರಾ ಈ ನಿಯಮಗಳನ್ನು ಪಾಲಿಸದೆ ಇದ್ದರೆ ನಿಮ್ಮ ದರ್ಶನ ಪೂರ್ತಿ ಆಗುವುದಿಲ್ಲ ನಿಮ್ಮಲ್ಲಿ ಸುಮಾರು ಜನರಿಗೆ ಈ ವಿಷಯ ಗೊತ್ತಿಲ್ಲ ಗೊತ್ತಿದ್ದರೂ ಕೂಡ ಕೆಲವರು ಆ ನಿಯಮಗಳನ್ನು ಪಾಲಿಸುವುದಿಲ್ಲ ಇನ್ನೊಂದು ಸಲ ನೀವು ತಿರುಮಲೆಗೆ ಹೋಗುವುದಾದರೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡುವುದಕ್ಕಿಂತ ಮುಂಚೆ ಏನೆಲ್ಲಾ ಪಾಲಿಸಬೇಕು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ಸ್ನೇಹಿತರೆ ನೀವು ತಿರುಪತಿಗೆ ಹೋಗುವುದಕ್ಕಿಂತ ಮುಂಚೆ ಮೊದಲು ನಿಮ್ಮ ಕುಲದೇವಕ್ಕೆ ನೀವು ಪೂಜೆ ಮಾಡಬೇಕು ಒಂದು ವೇಳೆ ನಿಮಗೆ ಕುಲದೇವ ಗೊತ್ತಿಲ್ಲ ಅಂದರೆ
ನಿಮ್ಮ ಇಷ್ಟ ದೇವಕ್ಕೆ ಮನಸ್ಸಿನಲ್ಲಿ ನೀವು ಪ್ರಾರ್ಥನೆ ಮಾಡಿಕೊಳ್ಳಬಹುದು ತಿರುಪತಿಗೆ ಹೋದ ಮೇಲೆ ತಿರಚಿನೂರು ಪದ್ಮಾವತಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಳ್ಳಬೇಕು ನೀವು ಕೇಳಬಹುದು ಸ್ನೇಹಿತರೆ ನಾನು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೋಸ್ಕರ ಬಂದಿದ್ದೀನಿ ನಾನ್ಯಾಕೆ ಈ ದೇವರ ದರ್ಶನ ಮಾಡಿಕೊಳ್ಳಬೇಕು ಎಂದು ನಮ್ಮ ಹಿಂದೂ ಶಾಸ್ತ್ರದ ಪ್ರಕಾರ ನಮಗೆ ಏನಾದರೂ ಬೇಕು ಎಂದರೆ ಮೊದಲ ನಮ್ಮ ತಾಯಿಯತ್ರಾನೆ ಕೇಳೋದಲ್ವಾ ಆಮೇಲೆ ಅಮ್ಮ ತಮ್ಮ ತಂದೆಯ ಹತ್ತಿರ ಹೇಳಿ ಅರ್ಥ ಮಾಡಿಸುತ್ತಾರೆ ಅದೇ ರೀತಿ ನಾವು ತಾಯಿಯ ಹತ್ತಿರ ಹೋಗಿ ಹೇಳಿದರೆ ಅದನ್ನು ತಾಯಿ ಕೇಳಿಸಿಕೊಳ್ಳುತ್ತಾಳೆ ಆಮೇಲೆ ತಂದೆ ಹತ್ತಿರ ಹೇಳಿ ಅವರಿಗೆ ಅರ್ಥ ಆಗೋತರ ಮಾಡುತ್ತಾರೆ ಅದು ಮಾತ್ರವಲ್ಲ ವೃಹ ಮಹರ್ಷಿ ಶ್ರೀ ವೆಂಕಟೇಶ್ವರ ಸ್ವಾಮಿಯ ಎದೆಗೆ ಹೊದ್ದಾಗ ಅದನ್ನು ನೋಡಿ ತಾಯಿಗೆ ಕೋಪ ಬಂದು ಅವರು ತಿರಚನೂರಿಗೆ ಬಂದರು ಪದ್ಮಾವತಿ ತಾಯಿಯನ್ನು ಬಿಟ್ಟಿರಲಿಕ್ಕೆ ಆಗುವುದಿಲ್ಲ ಎಂಬ ಸ್ವಾಮಿನು ತಿರಚನೂರಿಗೆ ಬಂದು ಧ್ಯಾನ ಮಾಡಿದರು ಆ ಕಾರಣದಿಂದಲೇ ಮೊದಲು ತಿರುಚನೂರಿಗೆ ಹೋಗಿ ಆಮೇಲೆ ತಿರುಮಲೆಗೆ ಹೋಗಬೇಕು ಎಂದು ಹೇಳಿದರು ತಿರುಮಲೆಗೆ ಹೋಗುವುದಕ್ಕಿಂತ ಮುಂಚೆ ನೀವು ದರ್ಶನ ಮಾಡಬೇಕಿರುವ ಇನ್ನೊಂದು ದೇವಸ್ಥಾನ ಕೂಡ ಇದೆ ಅದು
ಶ್ರೀ ಗೋವಿಂದರಾಜ ಸ್ವಾಮೀಜಿಯವರ ದೇವಸ್ಥಾನ ಗೋವಿಂದರಾಜ ಸ್ವಾಮಿಜಿ ಬೇರೆ ಯಾರು ಅಲ್ಲ ಸ್ನೇಹಿತರೆ ಸಮುದ್ರದಲ್ಲಿರುವ ಶ್ರೀ ಮಹಾವಿಷ್ಣು ಭಗವಾನ್ ಮಹಾ ವಿಷ್ಣು ದಶಾವತಾರ ಎತ್ತಿದರು ಕಲಿಯುಗದಲ್ಲಿ ತಿರುಮಲೆಯ ವೆಂಕಟೇಶ್ವರರಾಗಿ ಇದ್ದರು ತಿರುಚನೂರು ಪದ್ಮಾವತಿ ದೇವಿಯವರ ದರ್ಶನ ಹಾಗೂ ಗೋವಿಂದರಾಜ ಸ್ವಾಮಿಯ ದರ್ಶನ ಮುಗಿದ ಮೇಲೆ ಅಲ್ಪಿರಿ ಇಲ್ಲ ಅಂದ್ರೆ ಶ್ರೀವಾರಿ ಮೆಟ್ಟು ದಾರಿಯ ಮೂಲಕ ನಾವು ತಿರುಮಲೆಗೆ ನಡೆದ ಹೋಗಬಹುದು ಅಲ್ಲಿಗೆ ಹೋದ ಮೇಲೆ ಖಂಡಿತ ಪುಷ್ಕರಣಿ ಜಲಪಾತದಲ್ಲಿ ನಾವು ಸ್ನಾನ ಮಾಡಬೇಕು ನಾವಲ್ಲಿಗೆ ಹೋಗುವುದಕ್ಕಿಂತ ಮುಂಚೇನೆ
ಶ್ರೀ ವೆಂಕಟೇಶ್ವರ ಸ್ವಾಮಿಯ ಪಾದಕ್ಕೆ ಪೂಜೆ ಮಾಡುವ ಭಾಗ್ಯ ಇದು ವೆಂಕಟಾಚಲ ಮಹಾತ್ಯಂ ಎಂಬ ಪುಸ್ತಕದ ಮೂಲಕ ನಾವು ಪಾಲಿಸಬೇಕಾಗಿರುವ ಇನ್ನೊಂದು ನಿಯಮವಿದೆ ತಿರುಮಲೆಯಲ್ಲಿ ಮೊದಲು ಇದ್ದವರು ವರಹ ಸ್ವಾಮಿ ಶ್ರೀ ವೆಂಕಟೇಶ್ವರ ಸ್ವಾಮಿ ವರಹ ಸ್ವಾಮಿಯ ಹತ್ತಿರ ತಿರುಮಲೆಯಲ್ಲಿ ಇರುವುದಕ್ಕೆ ಜಾಗ ಕೊಡಿ ಎಂದು ಕೇಳಿದರು ಅದಕ್ಕೆ ಬದಲಾಗಿ ಶ್ರೀ ವರಹ ಸ್ವಾಮಿಗೆ ಮೊದಲನೇ ಪೂಜೆ ಮೊದಲನೇ ದರ್ಶನ ಸಿಗುತ್ತದೆ ಎಂದು ವರಹ ಸ್ವಾಮಿಗೆ ವೆಂಕಟೇಶ್ವರ ಸ್ವಾಮಿ ಮಾತು ಕೊಟ್ಟರು ಇದಕ್ಕೆ ವರಹ ಸ್ವಾಮಿ ಕೂಡ ಸರಿ ಎಂದು ಹೇಳಿ ಪುಷ್ಕರಣಿಯ ದಕ್ಷಿಣ ದಿಕ್ಕಿನಲ್ಲಿದ್ದ 100 ಅಡಿ ಜಾಗವನ್ನು ಸ್ವಾಮಿಗೆ ಕೊಟ್ಟರು ಇವಾಗ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯವಾದ ಕಾರಣ ವರಹ ಸ್ವಾಮಿ ಆದರೆ ನಮ್ಮಲ್ಲಿ ಎಷ್ಟು ಜನ ಶ್ರೀ ವರಾಹ ಸ್ವಾಮಿಯ ದರ್ಶನ ನೋಡಿದ್ದೇವೆ ಹೇಳಿ ತಿರುಮಲಲೆಗೆ ಹೋದರೆ ಸಾಕು ಡೈರೆಕ್ಟ್ ಆಗಿ
ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡುತ್ತೇವೆ ನಿಜ ಹೇಳಬೇಕೆಂದರೆ ಕೆಲವರು ಮಾತ್ರ ಶ್ರೀ ವರಹ ಸ್ವಾಮಿ ದೇವಸ್ಥಾನದಲ್ಲಿ ಇರುವುದನ್ನು ನೋಡಲಿಕ್ಕೆ ಆಗುತ್ತದೆ ಇದರಿಂದ ಏನು ಗೊತ್ತಾಗುತ್ತದೆ ಎಂದರೆ ಶ್ರೀ ವೆಂಕಟೇಶ್ವರ ಸ್ವಾಮಿ ವರಹ ಸ್ವಾಮಿಗೆ ಕೊಟ್ಟ ಮಾತಿಗೆ ನಾವು ಸ್ವಲ್ಪನೂ ಬೆಲೆ ಕೊಡುವುದಿಲ್ಲ ಶ್ರೀ ವೆಂಕಟೇಶ್ವರ ಸ್ವಾಮಿಯ ಮಾತಿಗೆ ನಾವು ಬೆಲೆ ಕೊಡದೆ ಸ್ವಾಮಿಯ ದರ್ಶನ ಮಾಡಿದರೆ ನಮಗೆ ದರ್ಶನ ಸಿಗುತ್ತದ ಇನ್ನು ಮುಂದೆ ಆದರೂ ನಾವು ಈ ನಿಯಮಗಳನ್ನು ಪಾಲಿಸಬೇಕು ವರಹ ಸ್ವಾಮಿಯ ದರ್ಶನವನ್ನು ನೋಡಿದ ಮೇಲೆ
ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡಬೇಕು ಕೆಲವರು ಸ್ವಾಮಿಯ ದರ್ಶನ ಮಾಡಿದ ಮೇಲೆನೆ ಅವರ ಕೂದಲನ್ನು ಕಾಣಿಕೆಯಾಗಿ ಕೊಡುತ್ತಾರೆ ಹಾಗೆ ಕಾಣಿಕೆ ಕೊಡುವುದರಲ್ಲಿ ಯಾವುದೇ ಪುಣ್ಯವಿಲ್ಲ ಕೂದಲನ್ನು ಕಾಣಿಕೆಯಾಗಿ ಕೊಟ್ಟ ಮೇಲೆನೆ ಸ್ವಾಮಿಯ ದರ್ಶನ ನೋಡುವುದಕ್ಕೆ ಹೋಗಬೇಕು ಇನ್ನು ಕೆಲವರು ತಿರುಮಲೆಯಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ನಡೆಯುತ್ತಾರೆ ಹಾಗೆ ಮಾಡಬೇಡಿ ಸ್ನೇಹಿತರೆ ಸಾಕ್ಷಾತ್ ಶ್ರೀ ವೆಂಕಟೇಶ್ವರ ಸ್ವಾಮಿಯೇ ನಡೆದಾಡಿರುವ ಜಾಗವದು ಸ್ವಾಮಿಗೆ ನಾವು ಮರ್ಯಾದೆ ಕೊಡಬೇಕು ಅಲ್ಲವೇ ದರ್ಶನ ಮುಗಿದಮೇಲೆ ನಾವು ನಮ್ಮ ಮನೆಗೆ ಹೊರಟು ಬಿಡುತ್ತೇವೆ
ಆದರೆ ಮನೆಗೆ ಹೋಗುವುದಕ್ಕಿಂತ ಮುಂಚೆ ನಾವು ನೋಡಬೇಕಾಗಿರುವ ಜಾಗ ಇನ್ನೂ ಜಾಸ್ತಿನೇ ಇದೆ ಎಲ್ಲವನ್ನು ನಾವು ಮರೆಯುತ್ತಿದ್ದೇವೆ ಆಂಜನೇಯ ಸ್ವಾಮಿಯ ದೇವಸ್ಥಾನ ಶ್ರೀವಾರಿ ಪಾದಲು ಚಕ್ರತೀರ್ಥಂ ಪಾಪ ವಿನಾಶ ತೀರ್ಥಂ ನಾಗತೀರ್ಥಂ ಆಕಾಶ ಗಂಗಾ ಇಂಥ ಸ್ಥಳಗಳು ತಿರುಮಲೆಯಲ್ಲಿ ಇದೆ ಒಂದೊಂದು ಸ್ಥಳದ ಹಿಂದೆ ಒಂದೊಂದು ಚರಿತ್ರೆ ಇದೆ ಆದ್ದರಿಂದ ಸ್ನೇಹಿತರೆ ಮುಂದಿನ ಸಲ ನೀವು ತಿರುಮಲೆಗೆ ಹೋದರೆ ಈ ನಿಯಮಗಳನ್ನು ಪಾಲಿಸಿ.