ಮಹಾ ಶಿವರಾತ್ರಿ ಎಂದರೆ ಶಿವನನ್ನು ಆರಾದಿಸುವಂತಹ ದಿನ. ಶಿವನ ಭಕ್ತರು ಶಿವನನ್ನು ಒಲಿಸಿಕೊಳ್ಳುವುದಕ್ಕೋಸ್ಕರ ಉಪವಾಸ ಇದ್ದು ಜಾಗರಣೆ ಮಾಡಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜೆ ಮಾಡಿ ಆರಾಧನೆ ಮಾಡುತ್ತಾರೆ. ಯಾರು ಶಿವರಾತ್ರಿ ದಿನ ಉಪವಾಸವಿದ್ದು ಜಾಗರಣೆ ಮಾಡಿ ಶಿವನನ್ನು ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೊ ಅಂತವರು ಏನೇ ಅಂದುಕೊಂಡರು ಸಹ ಮನಸ್ಸಿನಲ್ಲಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ.
2024ರಲ್ಲಿ ಮಹಾಶಿವರಾತ್ರಿ ಮಾರ್ಚ್ 8ನೆ ತಾರೀಕು ಶುಕ್ರವಾರ ದ ರಾತ್ರಿ 9:57 ನಿಮಿಷಕ್ಕೆ ಪ್ರಾರಂಭವಾಗಿ ಮಾರ್ಚ್ 9ನೇ ತಾರೀಕು ಸಂಜೆ 6:17 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಶಿವನಿಗೆ ಬೆಳಗ್ಗಿನ ಸಮಯ ಪೂಜೆಗಿಂತ ರಾತ್ರಿ ಸಮಯದ ಪೂಜೆನೆ ತುಂಬಾ ಶ್ರೇಷ್ಠ. ಹಾಗಾಗಿ ಚತುರ್ದಶಿ ತಿಥಿ ರಾತ್ರಿ ಸಮಯ ಯಾವಾಗ ಇರುತ್ತದೆಯೋ ಅದನ್ನೇ ನಾವು ಆಚರಣೆ ಮಾಡಬೇಕು.ಹಾಗಾಗಿ ಈ ಬಾರಿ ಶುಕ್ರವಾರದ ದಿನ ಶಿವರಾತ್ರಿ ಆಚರಣೆ ಮಾಡಬೇಕು.
ಶುಕ್ರವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯೆಲ್ಲಾ ಸ್ವಚ್ಛಗೊಳಿಸಿ ಪೂಜೆ ಮಾಡಿ ಸಂಕಲ್ಪ ಮಾಡಿ ಉಪವಾಸದಲ್ಲಿ ಇರಬೇಕು. ನಿಮ್ಮ ಶಕ್ತಿ ಅನುಸಾರವಾಗಿ ಭಕ್ತಿಯಿಂದ ನಿಷ್ಠೆಯಿಂದ ಉಪವಾಸವನ್ನು ಮಾಡಬೇಕು.