ಪ್ರತಿಯೊಂದು ತಿಂಗಳು ಬಹಳ ವಿಶೇಷ. ತನ್ನದೇ ಆದ ಗುಣ ಲಕ್ಷಣಗಳನ್ನು ಈ ತಿಂಗಳುಗಳು ಹೊಂದಿರುತ್ತವೆ. ಹಾಗೆಯೇ, ಆ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಸಹ ವಿಭಿನ್ನ. ಈ ಜೂನ್ ತಿಂಗಳಲ್ಲಿ ಜನಿಸಿದವರು ಬಹಳ ವಿಶೇಷವಂತೆ. ಇದಕ್ಕೆ ಕಾರಣ ಸಹ ಇದೆ. ಏನದು? ಈ ಇಲ್ಲಿದೆ ನೋಡಿ.
ಒಬ್ಬ ವ್ಯಕ್ತಿಯ ಗುಣ ಅಥವಾ ಭವಿಷ್ಯವನ್ನ ಅವರು ಹುಟ್ಟಿದ ತಿಂಗಳು, ಸಮಯ ಹಾಗೂ ರಾಶಿಯ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಈ ಕಾರಣದಿಂದಲೇ ಜನರ ಗುಣ ಬಹಳ ವಿಭಿನ್ನವಾಗಿರುತ್ತದೆ. ಆದರೆ ಒಂದೇ ತಿಂಗಳಲ್ಲಿ ಹುಟ್ಟಿದವರಿಗೆ ಸ್ವಲ್ಪ ಹೋಲಿಕೆ ಇರುತ್ತದೆ.
ಹಾಗೆಯೇ, ಜೂನ್ ತಿಂಗಳ ಬಗ್ಗೆ ಮಾತನಾಡುವುದಾದರೆ ಇದು ಬಹಳ ವಿಶೇಷವಾದ ತಿಂಗಳು ಎನ್ನಬಹುದು. ಬೇಸಿಗೆ ಕಾಲ ಒಂದೆಡೆ ಮುಗಿಯುತ್ತಿದ್ದರೆ, ಮಳೆಗಾಲ ಆರಂಭವಾಗುತ್ತದೆ, ಇದೊಂಥರ ಮಿಶ್ರ ಭಾವ ಹೊಂದಿರುವ ತಿಂಗಳು ಎಂದರೆಚ ತಪ್ಪಾಗಲಾರದು.
ಈ ತಿಂಗಳಲ್ಲಿ ಜನಿಸಿದವರು ಸಹ ಬಹಳ ವಿಭಿನ್ನ ಗುಣವನ್ನ ಹೊಂದಿರುತ್ತಾರೆ. ಮುಖ್ಯವಾಗಿ ಇವರು ವಿನಯವಂತರು ಹಾಗೂ ಗುಣವಂತರು ಎನ್ನಲಾಗುತ್ತದೆ. ಅಲ್ಲದೇ, ಇವರು ಯಾವಾಗಲೂ ಎಲ್ಲರಿಗೂ ಸಹಾಯ ಮಾಡಲು ಸಿದ್ಧರಿರುತ್ತಾರೆ. ಬೇರೆಯವರಿಗಾಗಿ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ.
ಇವರು ಎಲ್ಲೇ ಹೋದರು ಜನರನ್ನ ಆಕರ್ಷಿಸುತ್ತಾರೆ. ಅವರ ಗುಣದಿಂದ ಸಮಾಜದಲ್ಲಿ ಮನ್ನಣೆಗಳಿಸುತ್ತಾರೆ. ಅಲ್ಲದೇ, ಇವರು ಯಾವುದೇ ಕೆಲಸ ಮಾಡಲು ಅದರಲ್ಲೂ ಒಳ್ಳೆಯ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಎಲ್ಲರೊಂದಿಗೆ ಬೆರೆಯುವ ಗುಣವನ್ನ ಹೊಂದಿರುತ್ತಾರೆ.
ಇನ್ನು ಈ ತಿಂಗಳಲ್ಲಿ ಜನಿಸಿದವರನ್ನ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎನ್ನಬಹುದು. ಇವರು ಯಾವಾಗ ಯಾವ ರೀತಿ ಇರುತ್ತಾರೆ ಎಂಬುದನ್ನ ತಿಳಿಯಲು ಸಾಧ್ಯವಿಲ್ಲ. ಒಮ್ಮೆ ಮಾತನಾಡುವಾಗ ಬಹಳ ಸಂತೋಷವಾಗಿದ್ದರೆ, ಮತ್ತೊಮ್ಮೆ ಕೋಪ ಮಾಡಿಕೊಂಡು ಕೂಗುತ್ತಾರೆ.
ಹಾಗೆಯೇ ಈ ತಿಂಗಳಲ್ಲಿ ಜನಿಸಿದವರು ವೃತ್ತಿ ಜೀವನದಲ್ಲಿ ಉತ್ತಮವಾದ ಸ್ಥಾನಗಳಿಸುತ್ತಾರೆ. ಇವರಿಗೆ ಶಿಕ್ಷಣ ಕ್ಷೇತ್ರ ಹಾಗೂ ಕಲಾ ಕ್ಷೇತ್ರ ಬಹಳ ಸೂಕ್ತವಾಗುತ್ತದೆ ಎನ್ನಬಹುದು. ಇವರಿಗೆ ಮಾಧ್ಯಮ ಕ್ಷೇತ್ರ ಸಹ ಸೂಟ್ ಆಗುತ್ತದೆ. ಆದರೆ ಇವರು ಮೊಂಡು ಸ್ವಭಾವ ಹೊಂದಿರುವುದರಿಂದ, ಕೆಲವೊಮ್ಮೆ ಕಷ್ಟವಾಗುತ್ತದೆ.
ಆದರೆ ಈ ರಾಶಿಯವರು ಸ್ನೇಹ ಸಂಪಾದನೆ ಮಾಡುವಲ್ಲಿ ಎತ್ತಿದ ಕೈ ಎನ್ನಬಹುದು. ಇವರಿಗಾಗಿ ಸ್ನೇಹಿತರು ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಹಾಗಾಗಿ ಜೂನ್ ತಿಂಗಳಲ್ಲಿ ಜನಿಸಿದವರು ಬಹಳ ವಿಶೇಷ ಎನ್ನಲಾಗುತ್ತದೆ.