ಕ್ರಿಕೆಟ್ ಪಿಚ್ ನಲ್ಲಿ ‘ಬೌಲ್ಡ್’, ರಾಜಕೀಯದಲ್ಲಿ ‘ಕಿಂಗ್ ಮೇಕರ್’: ತೇಜಸ್ವಿ ಜೀವನವೇ ವಿಭಿನ್ನ

ನಿತೀಶ್ ಕುಮಾರ್ ಮತ್ತೊಮ್ಮೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿಯಲು ನಿರ್ಧರಿಸಿದ್ದಾರೆ. ನಿತೀಶ್ ಈಗ ಮತ್ತೆ 2015ರ ಸೂತ್ರದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಹೊರಟಿದ್ದಾರೆ. ಇದರಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಪ್ರಸಾದ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಲ್ಲ ಮೂಲಗಳು ಮಾಹಿತಿ  ನೀಡಿವೆ. ಕ್ರಿಕೆಟ್ ಪಿಚ್‌ನಿಂದ ಅಧಿಕಾರದ ಕಾರಿಡಾರ್‌ಗೆ ಆಗಮಿಸಿದ ತೇಜಸ್ವಿ ಯಾದವ್ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ: Viral Video : ತಾಳಿ ಕಟ್ಟುವಾಗಲೇ ಹೊಡೆದಾಡಿಕೊಂಡ ವಧು – ವರರು.. ಮುಂದೇನಾಯ್ತು ನೀವೇ ನೋಡಿ!

ಬಿಹಾರದ ಯುವ ರಾಜಕಾರಣಿ ತೇಜಸ್ವಿ ಯಾದವ್ ಅವರು 9 ನವೆಂಬರ್ 1989 ರಂದು ಬಿಹಾರದ ಗೋಪಾಲ್ಗಂಜ್ನಲ್ಲಿ ಜನಿಸಿದರು. ತೇಜಸ್ವಿಗೆ 32 ವರ್ಷ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಿಹಾರದ ಪಾಟ್ನಾದಲ್ಲಿ ಪೂರ್ಣಗೊಳಿಸಿದ್ದಾರೆ. ಇದಾದ ಬಳಿಕ ತೇಜಸ್ವಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಆಗಮಿಸಿದರು. ಅವರು ದೆಹಲಿಯಲ್ಲಿ ತಮ್ಮ ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಪ್ರವೇಶ ಪಡೆದ ಅವರು, ತಮ್ಮ ಶಾಲಾ ಶಿಕ್ಷಣದ ಬಳಿಕ ಜೀವನದಲ್ಲಿ ಹೊಸ ಬದಲಾವಣೆ ಕಂಡುಕೊಂಡರು. ತೇಜಸ್ವಿ ಈ ಶಾಲೆಯಲ್ಲಿ ಓದುವುದರ ಜೊತೆಗೆ ಕ್ರಿಕೆಟ್ ಆಡುತ್ತಿದ್ದರು. ಅಂದಹಾಗೆ, ಅವರು ಬಾಲ್ಯದಿಂದಲೂ ಕ್ರಿಕೆಟ್ ಆಡುವುದನ್ನು ತುಂಬಾ ಇಷ್ಟಪಡುತ್ತಿದ್ದರು. ತೇಜಸ್ವಿ 6ನೇ ತರಗತಿಯಿಂದ 9ನೇ ತರಗತಿವರೆಗೆ ಈ ಶಾಲೆಯಲ್ಲಿ ಓದಿದ್ದಾರೆ.

ಸಮಯ ಸಿಕ್ಕಾಗ ತೇಜಸ್ವಿ ಕ್ರಿಕೆಟ್ ಆಡಲೆಂದು ಶಾಲೆಗೆ ಹೋಗುತ್ತಿದ್ದರು. ಓದು ಬಿಟ್ಟ ನಂತರ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಅವರು ಕ್ರಿಕೆಟ್‌ನಲ್ಲಿ ಎಷ್ಟು ದೂರ ಹೋದರು ಎಂದರೆ ಐಪಿಎಲ್‌ನ ಭಾಗವೂ ಆಗಿದ್ದರು. ಆದರೆ ತೇಜಸ್ವಿ ಅವರ ಭವಿಷ್ಯ ರಾಜಕೀಯದಲ್ಲಿತ್ತು.

ತೇಜಸ್ವಿ ಪ್ರಸಾದ್ ಯಾದವ್ ಕೂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಅವರಿಗೆ ಒಂದೇ ಒಂದು ಕ್ರಿಕೆಟ್ ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ನಂತರ ತೇಜಸ್ವಿ ತನ್ನ ಭವಿಷ್ಯವನ್ನು ರಾಜಕೀಯದಲ್ಲಿ ನೋಡಿದರು. 2010ರಲ್ಲಿ ರಾಜಕೀಯಕ್ಕೆ ಕಾಲಿಟ್ಟರು. 

2010ರಲ್ಲಿ ತೇಜಸ್ವಿ ಯಾದವ್ ರಾಜಕೀಯಕ್ಕೆ ಕಾಲಿಟ್ಟಾಗ ಯುಪಿಎ ಸರ್ಕಾರವಿತ್ತು. ರಾಜಕೀಯಕ್ಕೆ ಬಂದ ನಂತರ ತೇಜಸ್ವಿ ಲಾಲು ಪ್ರಸಾದ್ ಪರ ಪ್ರಚಾರ ಆರಂಭಿಸಿದ್ದರು. 2015 ರಲ್ಲಿ, ತೇಜಸ್ವಿ ಯಾದವ್ ಮೊದಲ ಬಾರಿಗೆ ಚುನಾವಣೆಗೆ ಪ್ರವೇಶಿಸಿದರು. ವೈಶಾಲಿ ಜಿಲ್ಲೆಯ ರಾಘೋಪುರ ವಿಧಾನಸಭೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ತೇಜಸ್ವಿ ಸುಮಾರು 90 ಸಾವಿರ ಮತಗಳನ್ನು ಪಡೆದು, ಎದುರಾಳಿ ಬಿಜೆಪಿಯ ಸತೀಶ್ ಕುಮಾರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಇನ್ನು ಸತೀಶ್ ಸುಮಾರು 68 ಸಾವಿರ ಮತಗಳನ್ನು ಪಡೆದಿದ್ದರು. ಆದರೆ ತೇಜಸ್ವಿ 22 ಸಾವಿರ ಮತಗಳಿಂದ ಗೆದ್ದಿದ್ದರು. ಆರ್‌ಜೆಡಿ-ಜೆಡಿಯು ಸರ್ಕಾರ ರಚನೆಯಾದಾಗ ಉಪ ಮುಖ್ಯಮಂತ್ರಿಯೂ ಆದರು. ನಂತರ ಮೈತ್ರಿ ಮುರಿದು ವಿರೋಧ ಪಕ್ಷದ ನಾಯಕರಾದರು.

ಇದನ್ನೂ ಓದಿ: New Government In Bihar: ನಾಳೆ ಬಿಹಾರದಲ್ಲಿ ಮಹಾಮೈತ್ರಿಕೂಟದ ಹೊಸ ಸರ್ಕಾರ ರಚನೆ, ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಸಮಾರಂಭ!

2015ರ ವಿಧಾನಸಭೆ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ನೇತೃತ್ವದಲ್ಲಿ ಹೋರಾಟ ನಡೆದಿತ್ತು, ಆದರೆ 2020ರ ಚುನಾವಣೆಯಲ್ಲಿ ತೇಜ್ ಪ್ರತಾಪ್ ಆರ್‌ಜೆಡಿಯನ್ನು ಮುನ್ನಡೆಸಿದ್ದರು. ಲಾಲು ಜೈಲಿನಲ್ಲಿದ್ದರು. ಹೀಗಿರುವಾಗ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ತೇಜಸ್ವಿ ಕಠಿಣ ಸವಾಲು ಹಾಕಿದ್ದರು. ಈ ಬಾರಿಯೂ ಬಿಜೆಪಿಯ ಸತೀಶ್ ಕುಮಾರ್ ಅವರನ್ನು ಸೋಲಿಸಿದ್ದಾರೆ. ಈ ಬಾರಿ ಗೆಲುವಿನ ಅಂತರ ಸುಮಾರು 38 ಸಾವಿರ ಆಗಿತ್ತು.

<

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment