ಸಾಮಾನ್ಯವಾಗಿ ಹೊಸದಾಗಿ ತಾಯಿಯಾದವರಿಗೆ ಬಹಳಷ್ಟು ಪ್ರಶ್ನೆಗಳು ಮತ್ತು ಆತಂಕಗಳು ಎದುರಾಗಬಹುದು. ನಿಮ್ಮ ಮಗುವಿಗೆ ಉತ್ತಮವಾದುದನ್ನು ಮಾಡಲು ನೀವು ಬಯಸುತ್ತೀರಿ. ಆದರೆ, ವಿಶೇಷವಾಗಿ ನೀವು ಹೊಸದಾಗಿ ಸ್ತನ್ಯಪಾನ ಮಾಡಿಸುವುದು ಸೇರಿದಂತೆ ಅನೇಕ ವಿಷಯಗಳಲ್ಲಿ ಕೆಲವು ಗೊಂದಲಗಳು ಹೆಚ್ಚಾಗಿರುತ್ತವೆ. ಈ ಸ್ತನ್ಯಪಾನ ಏಕೆ ಅತ್ಯಗತ್ಯ ಮತ್ತು ಹೊಸದಾಗಿ ತಾಯಿಯಾದವರು ಈ ಬಗ್ಗೆ ಏನೆಲ್ಲಾ ತಿಳಿದುಕೊಂಡಿರಬೇಕು ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳೋಣ.
ಸ್ತನ್ಯಪಾನದಿಂದ ಮಗು ಮತ್ತು ತಾಯಿಗೆ ಆಗುವ ಪ್ರಯೋಜನಗಳು :
ಸ್ತನ್ಯಪಾನವು ಮಗು ಮತ್ತು ತಾಯಿ ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಈ ಸ್ತನ್ಯಪಾನವು ತಾಯಿ ಮತ್ತು ಮಗುವಿನ ನಡುವೆ ಒಂದು ಬಾಂಧವ್ಯವನ್ನು ಬೆಸೆಯುತ್ತದೆ. ಇದು ಇವರಿಬ್ಬರ ಜೀವನಪರ್ಯಂತ ಮುಂದುವರಿಯುತ್ತದೆ. ಇದಲ್ಲದೇ, ವಿವಿಧ ಬಗೆಯ ಅಲರ್ಜಿಗಳು ಮತ್ತು ರೋಗಗಳಿಂದ ನವಜಾತಶಿಶುವನ್ನು ರಕ್ಷಿಸುತ್ತದೆ. ಮಕ್ಕಳಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಈ ಎದೆಹಾಲು ಒದಗಿಸುತ್ತದೆ. ವಿವಿಧ ಬಗೆಯ ವಿಟಮಿನ್ ಗಳು, ಪೌಷ್ಟಿಕಾಂಶಗಳು ಮತ್ತು ಕೊಬ್ಬಿನ ಅಂಶಗಳನ್ನು ಹೊಂದಿರುವ ಎದೆಹಾಲು, ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಇದನ್ನೂ ಓದಿ: Chanakya Niti: ಹೆಂಡತಿ ತನ್ನ ಗಂಡನ ಜತೆ ಈ 5 ರಹಸ್ಯಗಳನ್ನು ಯಾವತ್ತೂ ಹಂಚಿಕೊಳ್ಳುವುದಿಲ್ಲವಂತೆ
ತಾಯಿಗೆ ಸಂಬಂಧಿಸಿದಂತೆ ಆಕೆ ಪ್ರಸವದ ನಂತರ ಹೆಚ್ಚಾಗುವ ತೂಕವನ್ನು ಈ ಸ್ತನ್ಯಪಾನ ಕಡಿಮೆ ಮಾಡಲು ನೆರವಾಗುತ್ತದೆ. ಹೆರಿಗೆಯ ನಂತರ ಗರ್ಭಾಶಯವು ಸಂಕುಚಿತಗೊಳ್ಳಲು ಮತ್ತು ಸಾಮಾನ್ಯ ಗಾತ್ರಕ್ಕೆ ಮರಳಲು ಸಹಾಯ ಮಾಡುತ್ತದೆ. ತಾಯಿಯ ಭಾವನಾತ್ಮಕ ಯೋಗಕ್ಷೇಮಕ್ಕೂ ಈ ಸ್ತನ್ಯಪಾನ ಅತ್ಯಗತ್ಯವಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುವ ಹಾರ್ಮೋನ್ ಗಳ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ತಾಯಿಯಲ್ಲಿ ಧನಾತ್ಮಕ ಭಾವನೆಗಳನ್ನು ಉಂಟು ಮಾಡುತ್ತದೆ.
ನಿಮ್ಮ ಮಗುವಿಗೆ ಎಷ್ಟು ಸಮಯ ಹಾಲುಣಿಸಬಹುದು?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಾಯಿಯು ತನ್ನ ಮಗುವಿಗೆ ಮೊದಲ 6 ತಿಂಗಳವರೆಗೆ ಎದೆ ಹಾಲುಣಿಸಬೇಕು. ನಂತರದಲ್ಲಿ ಮಗುವಿಗೆ ಪೂರಕ ಆಹಾರಗಳನ್ನು ನೀಡಬಹುದು. ಆದಾಗ್ಯೂ, ಮಗುವಿಗೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದವರೆಗೆ ಸ್ತನ್ಯಪಾನವನ್ನು ಮುಂದುವರಿಸಲು ಸೂಚಿಸಲಾಗುತ್ತದೆ.
ಮಗು ಜನಿಸಿದ ಆರಂಭಿಕ ವಾರಗಳಲ್ಲಿ ದಿನಕ್ಕೆ ಕನಿಷ್ಠ 8-12 ಬಾರಿ ಎದೆ ಹಾಲುಣಿಸಬೇಕು. ಇದು ಆರೋಗ್ಯಕರವಾದ ಹಾಲು ಪೂರೈಕೆಯನ್ನು ಖಚಿತಪಡಿಸುತ್ತದೆ. ನಿಮ್ಮ ನವಜಾತ ಶಿಶು 4 ಗಂಟೆಗಳಿಗಿಂತ ಹೆಚ್ಚು ಕಾಲ (ರಾತ್ರಿ ಸೇರಿದಂತೆ) ಆಹಾರವಿಲ್ಲದೇ ಇರಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ?
ತಾಯಿಯಾದವರು ನೀವು ಹೆಚ್ಚು ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ವೈದ್ಯರು ಅಥವಾ ಉತ್ತಮ ಶಿಶು ವೈದ್ಯರಿಂದ ಸಲಹೆಗಳನ್ನು ತೆಗೆದುಕೊಳ್ಳಿ. ಅಗತ್ಯವಿರುವ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡಲು ಇರುವ ಜನರೊಂದಿಗೆ ಬೆರೆಯಿರಿ. ನಿಮ್ಮ ಜೀವನಶೈಲಿ ಮತ್ತು ಆಹಾರ ಕ್ರಮದ ಬಗ್ಗೆ ಹೆಚ್ಚು ಕಾಳಜಿವಹಿಸಿ. ಇದು ನಿಮಗೆ ಮತ್ತು ನಿಮ್ಮ ಮಗುವಿನ ಆರೋಗ್ಯದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ವ್ಯಾಯಾಮ ಮತ್ತು ಪೋಷಣೆಯೊಂದಿಗೆ ಗರ್ಭಧಾರಣೆಯ ನಂತರದ ಚೇತರಿಕೆಯೊಂದಿಗೆ ನೀವು ಅಸಾಧಾರಣವಾದುದನ್ನು ಮಾಡಬಹುದು ಮತ್ತು ಮೃದುವಾದ ಸ್ತನ್ಯಪಾನದ ಅನುಭವವನ್ನು ಹೊಂದಬಹುದಾಗಿದೆ.
ಸ್ತನ್ಯಪಾನ ಮಾಡಲು ಪ್ರಯತ್ನಿಸುವ ಸಂದರ್ಭದಲ್ಲಿ ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ನಿಮ್ಮ ವೈದ್ಯರಿಂದ ಅಥವಾ ಹಾಲುಣಿಸುವ ತಜ್ಞರಿಂದ ಸಂಪರ್ಕ ಮಾಡಿ ಅವರಿಂದ ಸಲಹೆ ಮತ್ತು ನೆರವನ್ನು ಪಡೆದುಕೊಳ್ಳಿ.
ಲೇಖಕರು: ಡಾ.ನಿತಿನ್ ಎಂ., ಕನ್ಸಲ್ಟೆಂಟ್- ಪೀಡಿಯಾಟ್ರಿಶಿಯನ್ ಅಂಡ್ ನಿಯೋನಾಟಲಾಜಿಸ್ಟ್, ಮದರ್ ಹುಡ್ ಹಾಸ್ಪಿಟಲ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.