ಮನೆಯ ಈ ಭಾಗದಲ್ಲಿ ಶತಪದಿ ಕಂಡರೆ ಅಶುಭ ನಿವಾರಣೆ ಖಂಡಿತ!

ಮಳೆಗಾಲದಲ್ಲಿ ಶತಪದಿ ಅಥವಾ ಲಕ್ಷ್ಮೀ ಚೇಳುಗಳು ಆಗಾಗ್ಗೆ ಕಂಡುಬರುತ್ತದೆ. ಆದರೆ ಮಳೆಯಿಲ್ಲದ ಸಂದರ್ಭದಲ್ಲಿ ಎಲ್ಲಾದರೂ ಶತಪದಿಗಳು ಕಂಡರೆ, ಅದಕ್ಕೆ ಕೆಲ ಅರ್ಥಗಳನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಶತಪದಿಯ ಹಠಾತ್ ಪ್ರತ್ಯಕ್ಷವು ಅದೃಷ್ಟ ಮತ್ತು ದುರದೃಷ್ಟವನ್ನು ಸೂಚಿಸುತ್ತದೆ.

ಇದನ್ನೂ ಓದಿ: NEET 2022: ಎಂಬಿಬಿಎಸ್ ಸೀಟ್‌ಗಳ ಸಂಖ್ಯೆ ಹೆಚ್ಚಳ: ಯಾವ ರಾಜ್ಯಕ್ಕೆ ಎಷ್ಟು ಸೀಟು?

ವಾಸ್ತು ತಜ್ಞರ ಪ್ರಕಾರ, ಶತಪದಿಯನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದದರಿಂದ ಮನೆಯಲ್ಲಿ ಕಂಡರೂ ಸಾಯಿಸದೆ ಮನೆಯಿಂದ ಹೊರಗೆ ಎಸೆಯಿರಿ. ಶತಪದಿಯನ್ನು ಕೊಲ್ಲುವುದರಿಂದ ವ್ಯಕ್ತಿಯ ಜಾತಕದಲ್ಲಿ ರಾಹುವಿನ ಸ್ಥಾನ ದುರ್ಬಲವಾಗುತ್ತದೆ ಎಂದು ಹೇಳಲಾಗುತ್ತದೆ. ಮತ್ತು ಇದು ಮಾನವನ ಮೇಲೆ ಅನಪೇಕ್ಷಿತ ಪರಿಣಾಮವನ್ನು ಬೀರುತ್ತದೆ. ಶತಪದಿಯನ್ನು ಶುಭ ಅಥವಾ ಅಶುಭ ಎಂದು ಹೇಗೆ ನೋಡಬೇಕು ಎಂದು ತಿಳಿಯೋಣ.

ಮನೆಯ ಯಾವುದೇ ಭಾಗದಲ್ಲಿ ಶತಪದಿಗಳು ಕಾಣಿಸಿಕೊಳ್ಳಬಹುದು. ಆದರೆ ಅವರ ನೋಟವು ವಾಸ್ತು ದೋಷಗಳನ್ನು ಸೂಚಿಸುವ ಕೆಲವು ಸ್ಥಳಗಳಿವೆ. ಮನೆಯ ಮಹಡಿಯಲ್ಲಿ ಶತಪದಿಗಳು ಹರಿದಾಡುತ್ತಿರುವುದು ಕಂಡುಬಂದರೆ ಮನೆಯಲ್ಲಿ ವಾಸ್ತು ದೋಷವಿದೆ ಎಂದು ಅರ್ಥ. ಅದೇ ಸಮಯದಲ್ಲಿ, ಅಡುಗೆ ಮನೆಯಲ್ಲಿ ಅವುಗಳು ಕಂಡರೆ ವಾಸ್ತುವಿನ ಅವನತಿಯನ್ನು ಸೂಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ತೆಗೆದುಕೊಂಡು ಹೋಗಿ ಮನೆಯಿಂದ ಹೊರಹಾಕಬೇಕು.

ವಾಸ್ತು ತಜ್ಞರ ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಹೊಸ್ತಿಲು, ಶೌಚಾಲಯ ಮತ್ತು ಮೆಟ್ಟಿಲುಗಳ ಮೇಲೆ ಶತಪದು ತೆವಳುತ್ತಿರುವುದು ಕಂಡುಬಂದರೆ, ಇವು ದುರ್ಬಲ ರಾಹುವಿನ ಚಿಹ್ನೆಗಳು ಎಂದು ಅರ್ಥ. ಅಷ್ಟೇ ಅಲ್ಲ ಅವುಗಳು ತಲೆಯ ಮೇಲೆ ಏರಿದರೂ, ರಾಹು ದುರ್ಬಲನ ಸಂಕೇತವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಇದು ಮುಂಬರುವ ಸಮಯದಲ್ಲಿ ಕೆಲವು ಕಾಯಿಲೆಗಳು ಎದುರಾಗುವ ಸಮಸ್ಯೆಯನ್ನೂ ಸೂಚಿಸುತ್ತದೆ.

ಅದೃಷ್ಟದ ಸಂಕೇತವೂ ಇದೆ: 
ಶತಪದಿಯು ದುರಾದೃಷ್ಟವನ್ನು ಮಾತ್ರ ಸೂಚಿಸುತ್ತದೆ ಎಂದು ಅಲ್ಲ. ಬದಲಿಗೆ ಇದು ಅದೃಷ್ಟವನ್ನು ಸೂಚಿಸುತ್ತದೆ. ದೇವರ ಮನೆಯಲ್ಲಿ  ಶತಪದಿಗಳು ಕಂಡರೆ ಅದು ಅದೃಷ್ಟದ ಸಂಕೇತವಾಗಿದೆ. ಶತಪದಿ ಇದ್ದಕ್ಕಿದ್ದಂತೆ ಮನೆಯಲ್ಲಿ ತೆವಳುತ್ತಿರುವುದನ್ನು ನೋಡಿದರೆ ಮತ್ತು ನಂತರ ಕಣ್ಮರೆಯಾದರೆ, ನಂತರ ಕೆಲವು ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಅರ್ಥ.

ಇದನ್ನೂ ಓದಿ: Weight Loss: ಪನೀರ್ ಹಾಗೂ ಮೊಟ್ಟೆ ಏಕಕಾಲಕ್ಕೆ ಸೇವಿಸಿದರೆ ತೂಕ ಇಳಿಕೆಯಾಗುತ್ತದೆಯಾ? ನಿಜಾಂಶ ಏನು

ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸತ್ತ ಶತಪದಿ ಕಂಡರೆ ದೊಡ್ಡ ಅನಾಹುತ ತಪ್ಪಿದಂತೆ ಎಂದು ಹೇಳಲಾಗುತ್ತದೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 



Source link

Leave a Comment