ಹೇಗಾದರೂ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುವ ವಿದ್ಯೆ ಈ ದಿನಾಂಕದಲ್ಲಿ ಹುಟ್ಟಿದವರಿಗೆ ಕರಗತ

ಬೆಂಗಳೂರು : ವೈದಿಕ ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಲೆಕ್ಕ ಹಾಕುತ್ತದೆ. ವ್ಯಕ್ತಿಯ ಜನ್ಮ ದಿನಾಂಕದ ಒಟ್ಟು ಮೊತ್ತವು ಅವನ ರಾಡಿಕ್ಸ್ ಅಥವಾ ಮೂಲಾಂಕ ಆಗಿರುತ್ತದೆ . ಆ ಮೂಲಾಂಕದ  ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ತಿಳಿಯಲಾಗುತ್ತದೆ. ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದ ವ್ಯಕ್ತಿಯ ಮೂಲಾಂಕ ಐದು ಆಗಿರುತ್ತದೆ. ಹಾಗಿದ್ದರೆ ಈ ದಿನಾಂಕ ದಲ್ಲಿ ಜನಿಸಿದವರ ಬಗ್ಗೆ ಏನು ಹೇಳುತ್ತದೆ ಸಂಖ್ಯಾ ಶಾಸ್ತ್ರ ತಿಳಿಯೋಣ . 

ಸಂಖ್ಯಾಶಾಸ್ತ್ರದ ಪ್ರಕಾರ, ಬುಧವು ಈ ಜನರ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ.  ಈ ಹಿನ್ನೆಲೆಯಲ್ಲಿ ಈ ಮೂಲಾಂಕದ ಜನರು ಬುದ್ಧಿವಂತರು ಮತ್ತು ಜ್ಞಾನವುಳ್ಳವರಾಗಿರುತ್ತಾರೆ. ಅವರು ಜೀವನದಲ್ಲಿ ಬರುವ ಪ್ರತಿಯೊಂದು ಸವಾಲನ್ನು ಯಾವುದೇ ಅಳುಕಿಲ್ಲದೆ ಎದುರಿಸುತ್ತಾರೆ. ಅಷ್ಟೇ ಅಲ್ಲ, ಆ ಸವಾಲುಗಳನ್ನು ಗೆದ್ದು ಬರುತ್ತಾರೆ. ಈ ಜನರನ್ನು ಧೈರ್ಯಶಾಲಿ ಮತ್ತು ಶ್ರಮಜೀವಿ ಎಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ : Videsh Yatra Yoga: ನಿಮ್ಮ ಜಾತಕದಲ್ಲಿ ವಿದೇಶಕ್ಕೆ ಹೋಗುವ ಯೋಗ ಇದೆಯಾ? ಹೀಗೆ ತಿಳಿದುಕೊಳ್ಳಿ

ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಪುಣರು :
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ 5 ರ ಜನರು ಬುದ್ಧಿವಂತರು. ವ್ಯವಹಾರದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ಹಿಂದೆ ಮುಂದೆ ನೋಡುವುದಿಲ್ಲ.  ಇವರ ಒಂದು ವಿಶೇಷತೆ ಏನೆಂದರೆ ಈ ದಿನಾಂಕದಂದು ಜನಿಸಿದವರು ಯಾವುದರ ಬಗ್ಗೆಯೂ ಹೆಚ್ಚು ಕಾಲ ಅಸಮಾಧಾನಗೊಳ್ಳುವುದಿಲ್ಲ. ಯಾವುದೇ ಸಮಸ್ಯಯೇ ಇರಲಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ತಮ್ಮನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಇವರುಗೆ ಚೆನ್ನಾಗಿ ಗೊತ್ತಿರುತ್ತದೆ.  ಈ ಕಾರಣದಿಂದಾಗಿಯೇ ಈ ದಿನಾಂಕದಂದು ಜನಿಸಿದವರು ಬೇರೆಯವರನ್ನು ಸುಲಭವಾಗಿ ಆಕರ್ಷಿಸುತ್ತಾರೆ.  

ಬಹುಬೇಗ ಸ್ನೇಹಿತರನ್ನು ಮಾಡುತ್ತಾರೆ : 
ರಾಡಿಕ್ಸ್ 5ರ ಜನರ ವಿಶೇಷತೆಯೆಂದರೆ ಈ ಜನರು ಬೇಗನೆ ಸ್ನೇಹಿತರಾಗುತ್ತಾರೆ. ಅವರಿಗೆ  ಅವರು ಇತರರ ಮನಸ್ಸನ್ನು ಬಹಳ ಬೇಗನೆ ಅರ್ಥಮಾಡಿಕೊಳ್ಳುತ್ತಾರೆ.  ಇವರು ಜೀವನದಲ್ಲಿ ಉತ್ತಮ ಶಿಕ್ಷಣ ಪಡೆಯುತ್ತಾರೆ. ಇವರು ಅನೇಕ ಭಾಷೆಗಳಲ್ಲಿ ಪ್ರವೀಣರು.  ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಇವರು ಉತ್ಸುಕರಾಗಿರುತ್ತಾರೆ. 

ಇದನ್ನೂ ಓದಿ : Chanakya Niti: ಮಹಿಳೆಯರು ಈ ಕೆಲಸ ಮಾಡುವಾಗ ಪುರುಷರು ಅಪ್ಪಿ-ತಪ್ಪಿಯೂ ನೋಡಬಾರದು

ಹಣದ ವಿಷಯಗಳಲ್ಲಿ ಅದೃಷ್ಟವಂತರು :
ಸಂಖ್ಯಾಶಾಸ್ತ್ರದ ಪ್ರಕಾರ, ಈ ಜನರ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ಹೊಸ ಆವಿಷ್ಕಾರಗಳ ಮೂಲಕ ಅದರಿಂದ ಲಾಭ ಗಳಿಸುತ್ತಾರೆ. ಹಣ ಮತ್ತು ಆಹಾರದ ಕೊರತೆ ಇವರನ್ನು ಕಾಡುವುದೇ ಇಲ್ಲ. ಅವರು ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಕಠಿಣ ಪರಿಶ್ರಮದಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರು ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಲಾಭ ಗಳಿಸುತ್ತಾರೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು  ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment