ಸೇಬುಗಳು ತುಂಬಾ ಆರೋಗ್ಯಕರ ಹಣ್ಣು. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಹಣ್ಣು. ಅದರ ಅದ್ಭುತ ಗುಣಲಕ್ಷಣಗಳಿಂದಾಗಿ ಕೆಲವು ತಜ್ಞರು ಇದನ್ನು ಮ್ಯಾಜಿಕ್ ಹಣ್ಣು ಎಂದೂ ಕರೆಯುತ್ತಾರೆ.ಇದು ಚರ್ಮದ ಆರೋಗ್ಯದಿಂದ ಹಿಡಿದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೇಬು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.
ಇದು ಸಾಕಷ್ಟು ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಿಸುವ ಅಂಶಗಳನ್ನು ಒಳಗೊಂಡಿದೆ. ಸೇಬುಗಳು ದೇಹದಲ್ಲಿ ಹೊಸ ಕೋಶಗಳ ರಚನೆಯನ್ನು ಉತ್ತೇಜಿಸುವ ಕೆಲವು ವಸ್ತುಗಳನ್ನು ಸಹ ಒಳಗೊಂಡಿದ್ದು, ಹೆಚ್ಚು ಪ್ರಯೋಜನಕಾರಿ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸೇಬುಗಳು ತುಂಬಾ ಒಳ್ಳೆಯದು ಎನ್ನಲಾಗುತ್ತದೆ.ಏಕೆಂದರೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಲ್ಲದು. ಸೇಬುಗಳ ನಿಯಮಿತ ಸೇವನೆಯು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಸೇಬುಗಳನ್ನು ಹೆಚ್ಚು ತಿನ್ನುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸೇಬುಗಳು ಫೈಬರ್ನಲ್ಲಿ ಸಮೃದ್ಧವಾಗಿವೆ, ಇದು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸೇಬು ರಾಮಬಾಣ.
ಕಿಡ್ನಿ ಸಮಸ್ಯೆಗಳನ್ನು ತಡೆಯಲು ಪ್ರತಿದಿನ ಬೆಳಗ್ಗೆ ಸೇಬನ್ನು ತಿನ್ನಬಹುದು. ಸೇಬನ್ನು ತಿನ್ನುವುದು ಮೆದುಳಿನ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ
ಸೇಬಿನಲ್ಲಿರುವ ಫೈಬರ್ ನಿಮ್ಮ ಹಲ್ಲುಗಳನ್ನು ಬಲವಾಗಿರಿಸಲು ಸಹಾಯ ಮಾಡುತ್ತದೆ. ಸೇಬು ತಿನ್ನುವುದು ಹೃದಯಕ್ಕೆ ತುಂಬಾ ಒಳ್ಳೆಯದು.ನಿಯಮಿತವಾಗಿ ಸೇಬಿನ ಸೇವನೆ ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.
ಪ್ರತಿದಿನ ಬೆಳಗ್ಗೆ ಸೇಬಿನ ಜ್ಯೂಸ್ ಸೇವಿಸುವುದರಿಂದ ಮುಖದಲ್ಲಿನ ವೈಟ್ ಹೆಡ್ಸ್ ಕಡಿಮೆಯಾಗುತ್ತದೆ. ಯಾವುದೇ ಸಮಯದಲ್ಲಿ ಸೇಬುಗಳನ್ನು ತಿನ್ನಬಹುದು. ಆದರೂ, ಬೆಳಿಗ್ಗೆ ಸೇಬು ತಿನ್ನುವುದು ಹೆಚ್ಚು ಪ್ರಯೋಜನಕಾರಿ.
ಸೇಬುಗಳಲ್ಲಿ ಫೈಬರ್ ಮತ್ತು ಪೆಕ್ಟಿನ್ ಸಮೃದ್ಧವಾಗಿದೆ. ಹಾಗಾಗಿ ರಾತ್ರಿ ಸೇಬನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಆದ್ದರಿಂದ ಬೆಳಿಗ್ಗೆ ಇದನ್ನು ತಿನ್ನಲು ಉತ್ತಮ ಸಮಯ ಎಂದು ಹೇಳಲಾಗುತ್ತದೆ.