ನೂರಾರು ವರ್ಷದವರೆಗೂ ಅರೋಗ್ಯವಂತರಾಗಿ ಇರಬೇಕು ಎಂದರೆ ನಮ್ಮ ಕರುಳಿನ ಅರೋಗ್ಯ ತುಂಬಾನೇ ಮುಖ್ಯ ಆಗಿರುತ್ತದೆ. ನಮ್ಮ ದೇಹವನ್ನು ದಿನ ಹೇಗೆ ಕ್ಲೀನ್ ಮಾಡಿಕೊಳ್ಳುತ್ತಿವೋ ಹಾಗೆ ನಮ್ಮ ಕರುಳಿನ ಸ್ವಚ್ಛವನ್ನು ಮಾಡಿಕೊಳ್ಳಬೇಕು.ಯಾವಾಗ ನಮ್ಮ ಹೊಟ್ಟೆ ಸ್ವಚ್ಛ ಆಗುತ್ತದೆಯೋ ಅವಾಗ ನಮ್ಮ ಇಡೀ ದೇಹ ಕೂಡ ಡಿಟ್ಯಾಕ್ಸ್ ಆಗುತ್ತದೆ. ಇದರಿಂದ ಹಲವಾರು ರೀತಿಯ ಕಾಯಿಲೆಗಳಿಂದ ದೂರ ಇರಬಹುದು. ನಮ್ಮ ಕರುಳು ಸ್ವಚ್ಚ ಆದಾಗ ನಮ್ಮ ಇಡೀ ಜೀರ್ಣಂಗ ವ್ಯವಸ್ಥೆ ಸರಿ ಆಗುತ್ತದೆ. ಇದರಿಂದ ನಾವು ತಿಂದ ಆಹಾರ ತುಂಬಾ ಚೆನ್ನಾಗಿ ಡೈಜೆಸ್ಟ್ ಆಗುತ್ತದೆ. ಇದು ದೇಹಕ್ಕೆ ಬೇಡವಾದ ಕೆಟ್ಟ ಟಕ್ಸಿನ್ ಅನ್ನು ಕೂಡ ಇದು ಹೊರ ಹಾಕುತ್ತದೆ.
ಒಂದು ವೇಳೆ ದೇಹದಿಂದ ಟ್ಯಾಕ್ಸಿನ್ ಹೊರ ಹೋಗದೆ ಇದ್ದರೆ ಅದು ದೇಹದಲ್ಲಿ ಹಾಗೆ ಉಳಿದುಕೊಳ್ಳುತ್ತದೆ. ಇದರಿಂದ ಗ್ಯಾಸ್ ಆಸಿಡಿಟಿ ಮತ್ತು ತಿಂದ ಆಹಾರ ಸರಿಯಾಗಿ ಡೈಜೆಸ್ಟ್ ಆಗದೆ ಇರುವುದು, ಮಲಬದ್ಧತೆ, ಹೊಟ್ಟೆ ಉಬ್ಬರ, ಬ್ಲೌಟಿಂಗ್, ಆಜೀರ್ಣ ಸಮಸ್ಸೆ ಹೀಗೆ ಹಲವಾರು ಗಂಭೀರವಾದ ಕಾಯಿಲೆ ಉಂಟಾಗಬಹುದು.
ಕರುಳು ಸ್ವಚ್ಛವಾಗಿ ಇಡುವುದು ಹೇಗೆ…?ಕರುಳು ಸ್ವಚ್ಛ ಮಾಡುವುದಕ್ಕೆ ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ಕುಡಿಯಬೇಕು. ಇದನ್ನು ನಿಧಾನವಾಗಿ ಕುಡಿಯಬೇಕು. ಈ ರೀತಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಡೈಜೆಸ್ಟಿವ್ ಸಿಸ್ಟಮ್ ಸ್ಟಿಮುಲೇಟ್ ಆಗುತ್ತದೆ ಮತ್ತು ದೇಹದಲ್ಲಿ ಇರುವ ಟ್ಯಾಕ್ಸಿನ್ ಎಲ್ಲಾ ಹೊರ ಹಾಕುವುದಕ್ಕೆ ಶುರು ಮಾಡುತ್ತದೆ. ಇದರಿಂದ ಲೈಟ್ ವೆಯಿಟ್ ಫೀಲ್ ಆಗುತ್ತದೆ.ನಿಂಬೆ ಹಣ್ಣಿನಲ್ಲಿ ಇರುವ ವಿಟಮಿನ್ c ಅಂಶ ಇಂಮ್ಯೂನಿಟಿ ಅನ್ನು ಬೂಸ್ಟ್ ಮಾಡುತ್ತದೆ. ಇಷ್ಟೇ ಅಲ್ಲದೆ ಸ್ಕಿನ್ ಹಾಗು ಬೋನ್ಸ್ ಅನ್ನು ಹೆಲ್ತ್ ಆಗಿ ಇಡುವುದಕ್ಕೆ ಇದು ತುಂಬಾ ಸಹಾಯ ಮಾಡುತ್ತದೆ.
ನಿಂಬೆ ಹಣ್ಣಿನ ಜ್ಯೂಸ್ ಕುಡಿದ ತಕ್ಷಣ ಯೋಗ ಎಕ್ಸಾರ್ಸೈಜ್ ಅನ್ನು ಮಾಡಬೇಕು. ಅರ್ಧ ಗಂಟೆ ನಂತರ ಆಲೂವೆರಾ ಜೆಲ್ ಅನ್ನು ಸೇವನೆ ಮಾಡಬೇಕು.ಇದು ಕರುಳಿನಲ್ಲಿ ಇರುವ ಕಲ್ಮಶವನ್ನು ಹೊರ ಹಾಕುವುದಕ್ಕೆ ಸಹಾಯ ಮಾಡುತ್ತದೆ. ಅಳೋವೆರಾ ತಿಂದ ಅರ್ಧ ಗಂಟೆ ವರೆಗೂ ಏನನ್ನು ಸೇವನೆ ಮಾಡಬಾರದು. ಅರ್ಧ ಗಂಟೆ ಬಳಿಕ ಬೆಳ್ಳಿಗಿನ ಟಿಫ್ಫೆನ್ ಅನ್ನು ತೆಗೆದುಕೊಳ್ಳಬೇಕು.
ಬೆಳಗ್ಗೆ ಟಿಫನ್ ಗೆ ಆದಷ್ಟು ಫ್ರೆಶ್ ಆದ ಫ್ರೂಟ್ಸ್ ಅನ್ನು ತೆಗೆದುಕೊಳ್ಳಬೇಕು.ಒಂದು ದೊಡ್ಡ ಬೌಲ್ ಆಗುವಷ್ಟು ಹಣ್ಣನ್ನು ಸೇವನೆ ಮಾಡಬೇಕು.ಇದರ ಜೊತೆಗೆ ಒಂದು ಬೌಲ್ ಉಪ್ಪಿಟ್ಟು ಸೇವನೆ ಮಾಡಬೇಕು ಅಥವಾ ಓಟ್ಸ್, ಹೆಸರು ಬೆಳೆ ಕಿಚ್ಚಡಿ ಸೇವನೆ ಮಾಡಬಹುದು. ಬೆಳಗ್ಗೆ ಹಣ್ಣು ಸೇವನೆ ಮಾಡುವುದರಿಂದ ನ್ಯೂಟ್ರೀಯಂಟ್ಸ್ ಸಿಗುತ್ತದೆ, ಮೀನಾರಲ್ಸ್ ಸಿಗುತ್ತದೆ ಹಾಗು ದೇಹಕ್ಕೆ ಸಿಗುವ ಎನರ್ಜಿ ಅನ್ನು ಇದು ನೀಡುತ್ತದೆ. ಹಣ್ಣಿನ ರಿಚ್ ಆದ ಫೈಬರ್ ಅಂಶ ಕೂಡ ಇದೆ. ಇದು ಕರುಳನ್ನು ಡಿಟ್ಯಾಕ್ಸ್ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.ತುಂಬಾ ಜನರಿಗೆ ಬೆಳಗ್ಗೆ ಟೀ ಕಾಫಿ ಕುದಿಯುವ ಅಭ್ಯಾಸ ಇರುತ್ತದೆ. ಅದನ್ನು ಆದಷ್ಟು ಬಿಟ್ಟರೆ ತುಂಬಾ ಒಳ್ಳೆಯದು.
ಇನ್ನು ಮಧ್ಯಾಹ್ನ ಊಟ ಮಾಡುವ ಅರ್ಧ ಗಂಟೆ ಮೊದಲು ಫ್ರೂಟ್ಸ್ ಗಳನ್ನು ಸೇವನೆ ಮಾಡಬೇಕು. ನಂತರ ಚಪಾತಿ, ರೈಸ್ ಮತ್ತು ತರಕಾರಿ ಪಲ್ಯಗಳನ್ನು ಸಹ ಸೇವನೆ ಮಾಡಬಹುದು. ಇನ್ನು ಗೋಧಿ ಹಿಟ್ಟು ಮಾಡಿಸುವ ರಾಗಿ ಸಜ್ಜೆ ನವಣೆ ಕಡಲೆ ಕಾಳು ಇಂತಹ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ಹಿಟ್ಟು ಮಾಡಿ ಚಪಾತಿ ಮಾಡಿ ಸೇವನೆ ಮಾಡಬೇಕು. ಇದರಲ್ಲಿ ರಿಚ್ ಆದ ಫೈಬರ್ ಅಂಶ ಕೂಡ ಇರುತ್ತದೆ.ಈ ರೀತಿ ಚಪಾತಿ ತಿನ್ನುವುದರಿಂದ ಅದು ಕರುಳಿಗೆ ಅಂಟುವುದಿಲ್ಲ ಮತ್ತು ಕರುಳು ಶುದ್ಧ ಆಗುವುದಕ್ಕೆ ಸಹಾಯ ಮಾಡುತ್ತದೆ.
ಇನ್ನು ಸಂಜೆ ಜೀರಿಗೆ ಕಷಾಯ ಸೋಂಪ ಕಾಳು ಸೇವನೆ ಮಾಡಬೇಕು.ಇಲ್ಲವಾದರೆ ನಿಮಗೆ ಇಷ್ಟವಾದ ಹಣ್ಣನ್ನು ಸೇವನೆ ಮಾಡಬಹುದು. ಇನ್ನು ರಾತ್ರಿ ಊಟವನ್ನು 7:00 ಗಂಟೆ ಒಳಗೆ ಸೇವನೆ ಮಾಡಬೇಕು. ಇದೆಲ್ಲಾ ಆದ ಬಳಿಕ ರಾತ್ರಿ ಮಲಗುವ ಮುನ್ನ ಇಸಬುಗೋಲೂ ಅನ್ನು ಒಂದು ಲೋಟ ಹಾಲಿಗೆ ಹಾಕಿ 2 ನಿಮಿಷ ಬಿಟ್ಟು ಕಲ್ಲು ಸಕ್ಕರೆ ಬೆರೆಸಿ ಸೇವನೆ ಮಾಡಬಹುದು. ಇದರಲ್ಲಿ ಫೈಬರ್ ಅಂಶ ತುಂಬಾ ಚೆನ್ನಾಗಿ ಇರುತ್ತದೆ. ಇಸಬು ಗೋಲು ಸೇವನೆ ಮಾಡುವುದರಿಂದ ಕರುಳಿನಲ್ಲಿ ಅಂಟಿರುವ ಕಲ್ಮಶವನ್ನು ಇದು ಹೊರ ಹಾಕುತ್ತದೆ. ಇದರ ಸೇವನೆಯಿಂದ ಕೊಲೆಸ್ಟ್ರೆಲ್ ಕೂಡ ಕಡಿಮೆ ಆಗುತ್ತದೆ ಮತ್ತು ದೇಹದಲ್ಲಿ ಇರುವ ಬೊಜ್ಜನ್ನು ಇದು ಕರಗಿಸುತ್ತದೆ.