ಇಂಗು ಪುಡಿ ಅಡುಗೆಯಲ್ಲಿ ಬಳಸುತ್ತೀರಾ ಹಾಗಾದರೆ ಈ ಮಾಹಿತಿ ನೋಡಿ!

ಸಾಂಪ್ರದಾಯಿಕ ಅಡುಗೆಯಿಂದ ಹಿಡಿದು ಚೈನೀಸ್ ನಂತಹ ಅಡುಗೆಯಲ್ಲಿ ಬಳಸುವ ಒಂದು ಪದಾರ್ಥವೆಂದರೆ ಅದು ಇಂಗು.ಈ ಒಂದು ಮಸಾಲೆಯನ್ನು ಬಳಸಿ ಯಾವುದಾದರು ಸಾಂಬಾರಿಗೆ ಒಗ್ಗರಣೆ ಸೇರಿಸಿದರೆ ಸಾಕು. ಅದರ ಘಮವೇ ಬದಲಾಗುತ್ತದೆ. ಆದರೆ ಇದೇ ಪದಾರ್ಥ ಆರೋಗ್ಯಕ್ಕೆ ಮ್ಯಾಜಿಕ್ ಮಾಡಬಹುದು.ಇಂಗು ಜೀರ್ಣಕ್ರಿಯೆಗೆ ಮತ್ತು ತೂಕ ನಷ್ಟಕ್ಕೆ ಉತ್ತಮವಾಗಿದ್ದು ಇದು ಬ್ಯಾಕ್ಟೀರಿಯ ವಿರೋಧಿ ಉರಿಯುತ್ತಾ ನಿವಾರಕ ಮತ್ತು ವೈರಾಣು ವಿರೋಧಿಗಳನ್ನು ಹೊಂದಿರುವುದರಿಂದ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಬಹಳ ಒಳ್ಳೆಯದು.

ಒಗ್ಗರಣೆಗೆ ಇಂಗನ್ನು ಸೇರಿಸುವುದನ್ನು ವರೆತುಪಡಿಸಿ ಅದನ್ನು ಸೇವಿಸುವ ಉತ್ತಮ ವಿಧಾನವೆಂದರೆ ಇಂಗು ನೀರು ತಯಾರಿಸಿ ಕುಡಿಯುವುದು. ಈ ರೀತಿ ಇಂಗನ್ನು ಸೇವಿಸಿ ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತದೆ.

ಒಂದು ಲೋಟ ಬೆಚ್ಚಗೆ ಇರುವ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಇಂಗು ಪೌಡರ್ ಸೇರಿಸಿ. ಉತ್ತಮ ಪ್ರಯೋಜನಗಳಿಗಾಗಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇಂಗು ನೀರನ್ನು ಕುಡಿಯುವುದರಿಂದ ಇದು ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ಜೀರ್ಣಕಾರಿ ಸಮಸ್ಯೆಯನ್ನು ನಿಭಾಯಿಸಲು ಇಂಗು ನಿಮಗೆ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಅಜೀರ್ಣದ ಸಮಸ್ಯೆಗಳಿಗೆ ಕಾರಣವಾಗುವ ಎಲ್ಲಾ ಹಾನಿಕಾರಕ ಜೀವಾಣುಗಳನ್ನು ಜೀರ್ಣಾಂಗವ್ಯೂಹ ದಿಂದ ಹೊರ ಹಾಕಲು ಸಹಾಯವಾಗುತ್ತದೆ.

ಇಂಗು ನೀರು ತೂಕ ನಷ್ಟಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ಚಯಪಚಯ ಹೆಚ್ಚಾದರೆ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಇಂಗು ನೀರು ಕುಡಿಯುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ ಮತ್ತು ನಿಮ್ಮ ಹೃದಯದ ಮೇಲೆ ಪರಿಣಾಮವನ್ನು ಬೀರಲು ಬಿಡುವುದಿಲ್ಲ.

ಚಳಿ ಗಾಲದಲ್ಲಿ ಬೇಗನೆ ಶೀತ ನೆಗಡಿ ಸಮಸ್ಯೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ಇಂಗು ನೀರು ಕುಡಿದರೆ ಶೀತ ನೆಗಡಿ ಕಡಿಮೆಯಾಗುತ್ತದೆ. ಇದು ಉಸಿರಾಟದ ಸಮಸ್ಸೆಯನ್ನು ದೂರವಿಡುತ್ತದೆ. ಜೊತೆಗೆ ಶೀತವನ್ನು ತಡೆಯುತ್ತದೆ.

ಇಂಗು ಉರಿಯುತ್ತಾ ನಿವಾರಕ ಗುಣಗಳನ್ನು ಹೊಂದಿದೆ. ತಲೆನೋವನ್ನು ನಿವಾರಿಸಲು ಸಹಾಯಮಾಡುತ್ತದೆ. ಇದು ನಿಮ್ಮ ತಲೆಯ ರಕ್ತನಾಳಗಳಲ್ಲಿ ಉರಿಯುತವನ್ನು ಕಡಿಮೆ ಮಾಡಿ ತಲೆನೋವಿನಿಂದ ಪರಿಹಾರವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

ಇನ್ನು ಪಿರಿಯಡ್ಸ್ ನೋವನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತದೆ.ಬೆನ್ನು ಕೆಳ ಹೊಟ್ಟೆಯ ನೋವನ್ನು ಹೋಗಲಾಡಿಸಲು ಇಂಗು ಉತ್ತಮ ಪರಿಹಾರವಾಗಿದೆ. ಇದು ರಕ್ತವನ್ನು ತೆಳುವಾಗಿಸಲು ಸಹಾಯಮಾಡುತ್ತದೆ. ಅಷ್ಟೇ ಅಲ್ಲದೆ ಇಂಗು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ.ಈ ಮೂಲಕ ಪಿರೇಡ್ಸ್ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇಂಗು ನೀರು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

Leave a Comment