Kannada Health tips:ಈ ವಿಷಯದಲ್ಲಿ ಸಣ್ಣಗಿರುವವರು ಹೇಗೆ ದಪ್ಪ ಆಗಬೇಕು ಮತ್ತು ಯಾವ ಪದಾರ್ಥಗಳನ್ನು ತಿಂದರೆ ಬೇಗನೆ ದಪ್ಪವಾಗಬಹುದು ಎಂಬುದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ.ಅಷ್ಟೇ ಅಲ್ಲದೆ ನೀವು ತುಂಬಾ ಸಣ್ಣ ಇದ್ದರೆ ನಿಮಗೆ ಯಾವುದೇ ರೀತಿಯ ಕೆಲಸ ಮಾಡಲು ಆಗುವುದಿಲ್ಲ ಸುಸ್ತು ಮತ್ತು ನಿಶಕ್ತಿ ಆಗುತ್ತದೆ ಅದಕ್ಕಾಗಿ ನೀವು ನಾವು ಹೇಳುವಂತಹ ಪದಾರ್ಥಗಳನ್ನು ತಿಂದರೆ ಬೇಗನೆ ದಪ್ಪವಾಗಬಹುದು.
ಮೊದನೆಯದಾಗಿ ಹಾಲನ್ನು ಕುಡಿಯಬೇಕು ಕೆನೆಭರಿತ ಹಾಲನ್ನು ಕುಡಿಯುವುದರಿಂದ ಬೇಗನೆ ತೂಕ ಹೆಚ್ಚು ಮಾಡಿಕೊಳ್ಳಬಹುದು.ಎರಡನೆಯದಾಗಿ ಆಲೂಗೆಡ್ಡೆಯನ್ನು ಅತಿ ಹೆಚ್ಚಾಗಿ ಸೇವಿಸುವುದರಿಂದ ಅದರಲ್ಲಿ ಕ್ಯಾಲ್ಸಿಯಂ ವಿಟಮಿನ್ ಇರುವುದರಿಂದ ನಿಮ್ಮ ತೂಕವನ್ನು ಬೇಗನೆ ಹೆಚ್ಚು ಮಾಡಿಕೊಳ್ಳಬಹುದು.ಮೂರನೆಯದಾಗಿ ಹಣ್ಣುಗಳನ್ನು ತಿನ್ನಬೇಕು ಎಂದರೆ ಬಾಳೆಹಣ್ಣು ಪೈನಾಪಲ್ ಮತ್ತು ಪರಂಗಿ ಹಣ್ಣು ಹೆಚ್ಚಾಗಿ ತಿನ್ನಬೇಕು.
ನಾಲ್ಕನೆಯದಾಗಿ ಬೇಯಿಸಿದ ಅಥವಾ ಹಸಿ ಮೊಟ್ಟೆಯನ್ನು ತಿನ್ನುವುದರಿಂದ ಕೂಡ ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಏಕೆಂದರೆ ಅಧಿಕವಾದ ಕ್ಯಾಲರಿಗಳು ಇರುತ್ತದೆ.ಕೊನೆಯದಾಗಿ ನೀವು ಆದಷ್ಟು ಡ್ರೈಫ್ರೂಟ್ಸ್ ಗಳನ್ನು ತಿನ್ನಬೇಕು ದ್ರಾಕ್ಷಿ ಗೋಡಂಬಿ ಬಾದಾಮಿ ಪಿಸ್ತಾ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು.