ನಮ್ಮ ಜೀವನಶೈಲಿಯಲ್ಲಿ ನಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ನಾವು ನಿಸರ್ಗ ದತ್ತವಾದ ಉತ್ಪನ್ನಗಳನ್ನು ಸೇವಿಸಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿಸರ್ಗದ ಮಡಿಲಲ್ಲಿ ಸಿಗುವ ಯಾವುದೇ ಹಣ್ಣು-ತರಕಾರಿಗಳು ಮತ್ತು ಹಸಿರು ಎಲೆ-ತರಕಾರಿ ನಮ್ಮ ಆರೋಗ್ಯಕ್ಕೆ ದುಪ್ಪಟ್ಟು ಆರೋಗ್ಯದ ಪರಿಣಾಮಗಳನ್ನು ತಂದುಕೊಡುತ್ತವೆ.
ಅಂತಹದೇ ಒಂದು ವಿಚಾರದ ಬಗ್ಗೆ ನಾವಿಲ್ಲಿ ಮಾತನಾಡಲು ಹೊರಟಿದ್ದೇವೆ. ಅದೇನು ಗೊತ್ತಾ? ಪಾಲಕ್ ಸೊಪ್ಪಿನ ಆರೋಗ್ಯ ಸೀಕ್ರೆಟ್. ಹೌದು, ಆರೋಗ್ಯ ತಜ್ಞರನ್ನು ಕೇಳಿದರೆ ಪಾಲಕ್ ಸೊಪ್ಪಿನ ಜ್ಯೂಸ್ ಪ್ರತಿದಿನ ಸೇವಿಸಬೇಕು ಎಂದು ಹೇಳುತ್ತಾರೆ. ಕಾರಣ ಏನು ಗೊತ್ತಾ? ತಿಳಿಯೋಣ ಬನ್ನಿ….
ಪಾಲಕ್ ಜ್ಯೂಸ್ ನಲ್ಲಿ ಸಿಗುವ ಪೌಷ್ಟಿಕ ಸತ್ವಗಳು-ಪಾಲಕ್ ಜ್ಯೂಸ್ ನಲ್ಲಿ ವಿವಿಧ ಬಗೆಯ ಪೌಷ್ಟಿಕ ಸತ್ವಗಳು, ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳು ಇರುತ್ತವೆ. ಜ್ಯೂಸ್ ಜೊತೆಗೆ ನಿಮಗೆ ನಾರಿನ ಅಂಶ ಯಥೇಚ್ಛವಾಗಿ ಸಿಗುತ್ತದೆ.ಅಷ್ಟೇ ಅಲ್ಲದೆ ವಿಟಮಿನ್ ಪ್ರಮಾಣ ಕೂಡ ಇರುವುದರಿಂದ ನಿಮಗೆ ಅಗತ್ಯವಾಗಿ ಬೇಕಾದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಕೆ, ವಿಟಮಿನ್ ಇ ಹೇರಳವಾಗಿ ಸಿಗುತ್ತದೆ.
ಇದರಲ್ಲಿ ಮ್ಯಾಂಗನೀಸ್, ಕಬ್ಬಿಣ, ಅಯೋಡಿನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೋಡಿಯಂ, ಪಾಸ್ಪರಸ್ ಮತ್ತು ಅನೇಕ ಬಗೆಯ ಅಮೈನೋ ಆಮ್ಲಗಳು ದೊರೆಯುತ್ತವೆ. ನಿಮ್ಮ ದೇಹದ ಪಿಹೆಚ್ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಮನುಷ್ಯನ ದೇಹದ ಆರೋಗ್ಯದ ಬಗ್ಗೆ ಹೇಳುವುದಾದರೆ…ಮನುಷ್ಯನ ದೇಹದ ಪ್ರತಿಯೊಂದು ಅಂಗಾಂಗಗಳಿಗೂ ಕೂಡ ಪಾಲಕ್ ಸೊಪ್ಪು ಅನು ಕೂಲಕಾರಿ. ಮೂಳೆಗಳು , ಕಣ್ಣುಗಳು, ಮಾಂಸಖಂಡಗಳು, ಹೊಟ್ಟೆ ಹೀಗೆ ಬಹುತೇಕ ಅಂಗಾಂಗ ಗಳಿಗೆ ಪಾಲಕ್ ಸೊಪ್ಪಿನಿಂದ ಪ್ರಯೋಜನವುಂಟು.ಅದರಲ್ಲೂ ಇದರ ಜೊತೆ ಕ್ಯಾರೆಟ್, ಆಪಲ್, ಸೌತೆಕಾಯಿ ಇತ್ಯಾದಿಗಳನ್ನು ಸೇರಿಸಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು ದುಪ್ಪಟ್ಟಾಗುತ್ತವೆ ಮತ್ತು ರುಚಿಕರವಾಗಿರುತ್ತದೆ.
ಪಾಲಾಕ್ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯಬಹುದು–ಸರಿಯಾದ ರೀತಿಯಲ್ಲಿ ಪಾಲಾಕ್ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಚು ಲಾಭವಿದೆ. ಮೇಲೆ ಹೇಳಿದ ಹಾಗೆ ತರಕಾರಿಗಳ ಜೊತೆ ಸೇರಿಸಿ ತಿನ್ನಬಹುದು ಅಥವಾ ಜ್ಯೂಸ್ ತಯಾರಿಸಿ ಸೇವಿಸಬಹುದು. ಇದರಲ್ಲಿ ವಿಟಮಿನ್ ಕೆ ಪ್ರಮಾಣ ಇರುವುದರಿಂದ ದೇಹದ ಮೂಳೆಗಳಿಗೆ ತುಂಬಾ ಬಲ ಬರುತ್ತದೆ.
ನಿಮ್ಮ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಮಲಬದ್ಧತೆ ಸಮಸ್ಸೆಯನ್ನು ದೂರ ಮಾಡುವ ಜೊತೆಗೆ ಹೊಟ್ಟೆಯಲ್ಲಿ ಒಂದು ವೇಳೆ ಅಲ್ಸರ್ ಉಂಟಾಗಿದ್ದರೆ ಅದನ್ನು ಸಹ ದೂರ ಮಾಡುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
ಚರ್ಮದ ಸಮಸ್ಯೆ ಇರುವವರಿಗೆ–ಚರ್ಮದ ಸಮಸ್ಯೆ ಇರುವವರಿಗೆ ಪಾಲಕ್ ಸೊಪ್ಪು ರಾಮಬಾಣ. ವಯಸ್ಸಾಗುವಿಕೆ ಪ್ರಕ್ರಿಯೆ ಯನ್ನು ದೂರ ಮಾಡಿ ಚರ್ಮದ ಮೇಲೆ ಕಂಡುಬರುವ ಸುಕ್ಕುಗಳು ಮತ್ತು ಸಣ್ಣ ಸಣ್ಣ ಗೆರೆಗಳನ್ನು ಹೋಗಲಾಡಿಸುತ್ತದೆ. ಚರ್ಮದ ಮೇಲೆ ಉಂಟಾಗುವ ಕೆರೆತ ದೂರ ಮಾಡುವುದು ಮಾತ್ರವಲ್ಲದೆ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
ಗರ್ಭಿಣಿ ಮಹಿಳೆಯರಿಗೆ–ಗರ್ಭಿಣಿ ಮಹಿಳೆಯರಿಗೆ ಪಾಲಕ್ ಸೊಪ್ಪು ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಬಾಣಂತಿ ಮಹಿಳೆ ಯರಿಗೆ ಕೂಡ ಪಾಲಕ್ ಸೊಪ್ಪು ಜ್ಯೂಸ್ ಸೇವಿಸುವುದರಿಂದ ಲಾಭವಿದೆ. ಹಾಲಿನ ಉತ್ಪತ್ತಿ ಹೆಚ್ಚಾಗಲು ಇದು ನೆರವಾಗುತ್ತದೆ.
ಕ್ಯಾನ್ಸರ್ ಸಮಸ್ಯೆ ಬರದಂತೆ ತಡೆಯುತ್ತದೆ….ಪಾಲಕ್ ಸೊಪ್ಪಿನಲ್ಲಿ ಕ್ಯಾರೋಟಿನ್ ಮತ್ತು ಕ್ಲೋರೋಫಿಲ್ ಇರುತ್ತದೆ. ಇದು ಕ್ಯಾನ್ಸರ್ ಸಮಸ್ಯೆ ಬರದಂತೆ ತಡೆಯುವುದರ ಜೊತೆಗೆ ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಸಮಸ್ಸೆ ಇರುವವರಿಗೆ ಕೂಡ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.ಇದರಲ್ಲಿ ಫ್ಲೇವನಾಯ್ಡ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಇರುವುದರಿಂದ ವಿವಿಧ ಬಗೆಯ ಕ್ಯಾನ್ಸರ್ ತೊಂದರೆಗಳಿಗೆ ಇದು ಒಂದು ರೀತಿಯ ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ–ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣುಗಳಿಗೆ ತುಂಬಾ ಒಳ್ಳೆಯದು ಎಂದು ಹೇಳು ತ್ತಾರೆ. ದೃಷ್ಟಿದೋಷ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಇದು ತುಂಬಾ ಬೆಸ್ಟ್. ಕಣ್ಣಿನ ಪೊರೆ ಮತ್ತು ರಾತ್ರಿ ಕುರುಡು ಸಮಸ್ಯೆಯನ್ನು ಅನುಭವಿಸುತ್ತಿರುವ ಜನರು ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು.