ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು|ಪ್ರತಿರೋಧಕ ಶಕ್ತಿಯನ್ನು

ನಾವು ಪ್ರತಿದಿನ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲ ಪಡಿಸಿಕೊಳಲು ಆರೋಗ್ಯಕರ ಅಭ್ಯಾಸಗಳನ್ನು ಗಮನ ಕೊಡ್ಬೇಕು ವಿನಃ ಅದನ್ನು ಹಾಳು ಮಾಡಿಕೊಳ್ಳುವ ಅಭ್ಯಾಸವನ್ನು ರೂಡಿಸಿಕೊಳ್ಳಬಾರದು.ಈಗಿನ ಕಾಲದಲ್ಲಿ ರೋಗ ನಿರೋಧಕ ಶಕ್ತಿ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ.ಅದರಲ್ಲೂ ಯಾರಾದರೂ ರೋಗ ಬಂದವರಿಗೆ ಕೇಳಿದರೆ ರೋಗ ನಿರೋಧಕ ಶಕ್ತಿ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ.ಅವರು ತಮ್ಮ ಅರೋಗ್ಯ ಸಮಸ್ಸೆಯನ್ನು ಹೇಗಾದರೂ ಮಾಡಿ ಸರಿಪಡಿಸಿಕೊಳ್ಳಬೇಕು ಎಂಬ ಅಂಬಲದಿಂದ ಅವರು ಪಡುವ ಪಾಡು ಅಷ್ಟ್ ಇಷ್ಟಲ ಆದರೆ ರೋಗ ನಿರೋಧಕ ಶಕ್ತಿ ಎನ್ನುವುದು ಮನುಷ್ಯನ ದೇಹದಲ್ಲಿ ಎಂದಿಗೂ ತಾನಾಗಿಯೇ ಉತ್ಪತ್ತಿ ಆಗುವುದಿಲ್ಲ ಉತ್ತಮ ಆಹಾರದ ಸೇವನೆ ಅತಿ ಮುಖ್ಯ.

ಆದರೆ ಇಂದಿನ ಜೀವನದ ಶೈಲಿ ಹೇಗಿದೆ ಎಂದರೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆಹೋಗಿ ಕೇವಲ ಕೆಟ್ಟ ಅಭ್ಯಾಸಗಳನ್ನು ರೂಢಿ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.ಕೇವಲ ಕೆಟ್ಟ ಚಟಗಳು ನಮ್ಮ ಆರೋಗ್ಯದ ಹಾನಿಗೆ ಕಾರಣವೆಂದು ಹೇಳಲು ಸಾಧ್ಯವಿಲ್ಲ. ನಮ್ಮದೇ ಜೀವನದಲ್ಲಿ ನಾವು ಸೇವಿಸಲೇಬೇಕಾದ ಕೆಲವೊಂದು ಆಹಾರವನ್ನು ಸೇವಿಸದೆ ನಿರ್ಲಕ್ಷ್ಯ ತೋರುವುದು ಕೂಡ ಒಂದು ಕೆಟ್ಟ ಅಭ್ಯಾಸವೇ. ಬನ್ನಿ ಹಾಗಾದರೆ ನಾವು ಮಾಡುವ ಕೆಟ್ಟ ಅಭ್ಯಾಸಗಳು ಯಾವುದು ಎಂದು ತಿಳಿಯೋಣ.

ವಿಪರೀತ ಮದ್ಯಪಾನ ಸೇವನೆ ಮಾಡುವುದು-ವಿಪರೀತ ಮದ್ಯಪಾನ ಸೇವನೆಯು ಆರೋಗ್ಯವನ್ನು ಹಾಳು ಮಾಡುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ ಹಲವು ಬಗೆಯ ಕಾಯಿಲೆಗಳಾದ ನಿಮೋನಿಯಾ, ಉಸಿರಾಟದ ತೊಂದರೆ, ಜೀರ್ಣಕ್ರಿಯೆ ಅಸ್ವಸ್ಥತೆ, ದೇಹದಲ್ಲಿ ಬಿಳಿಯ ರಕ್ತಕಣಗಳನ್ನು ಸಂಖ್ಯೆ ತಗ್ಗಿಸುವುದು. ಹೀಗೆ ಒಂದಾದ ಮೇಲೊಂದು ಸಮಸ್ಯೆಗಳನ್ನು ಉಂಟು ಮಾಡಿ ನಿಧಾನವಾಗಿ ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ.ಆದ್ದರಿಂದ ಆರೋಗ್ಯವಾಗಿರಬೇಕೆಂದರೆ ಮದ್ಯಪಾನದಿಂದ ದೂರವಿರಬೇಕು.

ವಿಪರೀತ ಉಪ್ಪು ಸೇವನೆ ಮಾಡುವುದು-ನಮ್ಮ ದೇಹಕ್ಕೆ ಉಪ್ಪಿನಂಶದ ಸೇವನೆ ಎಂದಿಗೂ ಒಳ್ಳೆಯದಲ್ಲ. ಏಕೆಂದರೆ ಒಬ್ಬ ವ್ಯಕ್ತಿಯ ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಷ್ಟು ಮೈಯಲ್ಲಿ ನೀರು ತುಂಬಿಕೊಳ್ಳುತ್ತದೆ ಜೊತೆಗೆ ರಕ್ತದ ಒತ್ತಡವು ಕೂಡ ವಿಪರೀತವಾಗಿ ಏರಿಕೆ ಆಗುತ್ತದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಮೂತ್ರಪಿಂಡಗಳು ಬಿಡುಗಡೆಗೊಳಿಸುವ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶ. ಇದು ದೇಹದ ಆರೋಗ್ಯಕರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕುಗ್ಗಿಸುತ್ತದೆ.ಅತಿಯಾಗಿ ಬಳಸಿದ, ಸೇರಿಸಿದ ಆಹಾರವನ್ನು ಸೇವಿಸಬೇಡಿ.

‌ ವಿಪರೀತ ಸಕ್ಕರೆ ಅಂಶದ ಸೇವನೆ-ನೀವು ಪ್ರತಿದಿನ ಸಕ್ಕರೆ ಅಂಶದ ಪಾನೀಯಗಳನ್ನು ಅಥವಾ ಆಹಾರಗಳನ್ನು ಸೇವನೆ ಮಾಡುತ್ತಾ ಹೋದರೆ ಇದು ನಿಮ್ಮ ಮೆದುಳಿನ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಪರೋಕ್ಷವಾಗಿ ನಿಮ್ಮ ದೇಹದಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ಕೂಡ ಹಾನಿಕರ ಉಂಟಾಗುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವನ್ನು ದೇಹ ಆರೋಗ್ಯಕರವಾದ ರೋಗನಿರೋಧಕ ಶಕ್ತಿಯನ್ನು ಒಳಗೊಂಡ ಪೋಷಗಳು ಹನಿಯಾಗಿ ಬ್ಯಾಕ್ಟೀರಿಯ ಮತ್ತು ವೈರಸ್ ಸೋಂಕಿಗೆ ದೇಹವನ್ನು ಹೆಚ್ಚಾಗಿ ಗುರಿ ಮಾಡುವ ಸಾಧ್ಯತೆ ಇದೆ. ಹಾಗಾಗಿ ಸಕ್ಕರೆ ಸೇವನೆಯಲ್ಲಿ ಪ್ರತಿದಿನ ಮಿತ ಕಾಯ್ದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

‌ದಿನವಿಡೀ ಹಲವು ಬಾರಿ ಕಾಫಿ ಅಥವಾ ಚಹಾ ಕುಡಿಯುವುದು-ಹೆಚ್ಚಿನ ಪ್ರಮಾಣದ ಚಹಾ ಮತ್ತು ಕಾಫಿ ಸೇವನೆಯು ಕೂಡ ನಮ್ಮ ದೇಹದ ಕೆಫಿನ್ ಅಂಶವನ್ನು ಒದಗಿಸುತ್ತದೆ.ಕೆಫಿನ್ ಅಂಶವೊಂದು ಆಂಟಿಆಕ್ಸಿಡೆಂಟ್ ಆಗಿದ್ದು ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣ ಓದರೆ ಪ್ಯಾಂಟಿ ಇನ್ಫಾಮೇಟರಿ ಗುಣ ಲಕ್ಷಣಗಳು ಹನಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸುವುದಾದರೆ ಅತಿಯಾದ ಕಾಫಿ ಮತ್ತು ಚಹಾದ ಸೇವನೆಯಿಂದ ದೂರವಿರಬೇಕು.

‌ಇನ್ನೊಂದು ಮುಖ್ಯ ತಪ್ಪೇನೆಂದರೆ ನಾರಿನ ಅಂಶವನ್ನು ಸೇವನೆ ಕಡಿಮೆ ಮಾಡುವುದು.-ನಮ್ಮ ದೇಹದ ಜೀರ್ಣಾಂಗದ ವ್ಯವಸ್ಥೆ ಮತ್ತು ಜೀರ್ಣಾಂಗದ ಆರೋಗ್ಯ ಸರಿಯಾಗಿರಬೇಕಾದರೆ ನಮ್ಮ ಆಹಾರದ ಪದ್ಧತಿಯಲ್ಲಿ ಹೆಚ್ಚಿನ ನಾರಿನಾಂಶ ಒಳಗೊಂಡ ಆಹಾರಗಳನ್ನು ಸೇವನೆ ಮಾಡಬೇಕು.ಇನ್ನು ಪ್ರೋಬಯೋಟಿಕ್ ಆಹಾರಗಳು ಕೂಡ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ರಕ್ಷಣೆ ಕೊಡುತ್ತದೆ.ಆದ್ದರಿಂದ ಆದಷ್ಟು ಹೆಚ್ಚಿನ ನಾರಿನಂಶ ಆಹಾರವನ್ನು ಸೇವಿಸಿದರೆ ಉತ್ತಮ. ಇನ್ನು ಎಲ್ಲ ತಪ್ಪುಗಳು ಅಷ್ಟೇ ಅಲ್ಲ ಸಾಲು ಸಾಲು ರೋಗಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ.ಆದ್ದರಿಂದ ಬಿಡದ ಪ್ಯಾಕೆಟ್ ಆಹಾರಗಳನ್ನು, ಕೂಲ್ಡ್ರಿಂಕ್ಸ್ ಗಳನ್ನು ವಿಪರೀತ ಸೇವನೆ ಮಾಡದಿರಿ. ಆದಷ್ಟು ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಆರೋಗ್ಯವಂತರಾಗಿರಿ.

Leave a Comment