ದಿನಾಲೂ 1ಬಾಳೆಹಣ್ಣು ಚಮತ್ಕರ ನೋಡಿ!

ಬಾಳೆಹಣ್ಣು ವಿಶ್ವದ ಎಲ್ಲಾ ಭಾಗದಲ್ಲೂ ಸುಲಭವಾಗಿ ಸಿಗುತ್ತದೆ. ದಿನಕ್ಕೊಂದು ಬಾಳೆಹಣ್ಣು ತಿಂದರೆ ಸಾಕು ಹಲವಾರು ಆರೋಗ್ಯ ಲಾಭಗಳು ದೊರೆಯುತ್ತದೆ.ಇದು ದೇಹಕ್ಕೆ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೇ. ಬಾಳೆಹಣ್ಣಿನಲ್ಲಿ ಸೇಬು ಗಿಂತಲೂ ಹೆಚ್ಚು ಪೋಷಕಾಂಶ ಇದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಲ್ಲಿ ಪೊಟ್ಯಾಷಿಯಂ ಇರುವುದರಿಂದ ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.

ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಬಾಳೆಹಣ್ಣಿನಲ್ಲಿ ಸಿರೋಟಿನ್ ಎನ್ನುವ ಅಂಶ ಇರುವುದರಿಂದ ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಹಲವಾರು ಪೋಷಕಾಂಶ ಇರುವ ಕಾರಣ ದೇಹಕ್ಕೆ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ.ನಿಶಕ್ತಿಯನ್ನು ದೂರಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ರಕ್ತಹೀನತೆಯನ್ನು ನಿವಾರಿಸುತ್ತದೆ.

ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿರುವುದರಿಂದ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೆ ಕಣ್ಣಿನ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಬಾಳೆಹಣ್ಣು ಸೇವಿಸಿದರೆ ನೀವು ಆರೋಗ್ಯವಾಗಿರುವುದು ಖಂಡಿತ. ಆದರೆ ಅತಿಯಾಗಿ ಬಾಳೆಹಣ್ಣನ್ನು ಸೇವನೆ ಮಾಡಬಾರದು. ಆರೋಗ್ಯವಂತ ವ್ಯಕ್ತಿ ದಿನಕ್ಕೆ 1-2 ಬಾಳೆಹಣ್ಣು ಸೇವನೆ ಮಾಡಿದರೆ ಸಾಕು.ಅತಿಯಾಗಿ ಬಾಳೆಹಣ್ಣನ್ನು ಸೇವನೆ ಮಾಡಿದರೆ ಅಜೀರ್ಣದ ಸಮಸ್ಯೆ ಕಾಡುತ್ತದೆ. ಅಧಿಕ ಸಕ್ಕರೆ ಅಂಶ ಇರುವುದರಿಂದ ಹಲ್ಲು ನೋವು ಉಂಟಾಗುತ್ತದೆ.

ಇನ್ನೂ ಬಾಳೆಹಣ್ಣು ಕಫದ ಸಮಸ್ಯೆ ಇರುವವರು ರಾತ್ರಿ ಸಮಯದಲ್ಲಿ ಸೇವಿಸಬಾರದು. ಬಾಳೆಹಣ್ಣು ಸೇವಿಸಿದ ತಕ್ಷಣ ನೀರು ಕುಡಿಯಬಾರದು. ಇದರಿಂದ ದೇಹದಲ್ಲಿ ಕಫದ ಬಾಧೆ ಉಂಟಾಗುತ್ತದೆ.ಇನ್ನು ಮಧುಮೇಹಿಗಳು ಬಾಳೆಹಣ್ಣನ್ನು ಸೇವನೆ ಮಾಡಬಾರದು.

https://www.youtube.com/watch?v=20XSngrmpX8

Leave a Comment