ಈ ಒಂದು ಚಟ್ನಿ ದೇಹದ ಅರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದು ಅಲ್ಲದೆ ನಮ್ಮ ನಾಲಿಗೆಗೆ ತುಂಬಾ ರುಚಿ ಕೂಡ ಕೊಡುತ್ತದೆ. ಈ ಚಟ್ನಿ ತಿಂದರೆ ದೇಹ ಸದೃಢ ಆಗುವುದಲ್ಲದೆ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸುತ್ತದೆ. ಕೂದಲಿನ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಜೀರ್ಣಂಗ ವ್ಯವಸ್ಥೆಗೆ ಸಂಬಂಧಪಟ್ಟ ಗ್ಯಾಸ್ ಆಸಿಡಿಟಿ, ಆಜೀರ್ಣ ಇಂತಹ ಎಲ್ಲಾ ಸಮಸ್ಸೆಯನ್ನು ಕಡಿಮೆ ಮಾಡುವುದರ ಜೊತೆಗೆ ಡೈಬಿಟಿಸ್ ಥೈರಾಯಿಡ್ ಯಿಂದ ಸಮಸ್ಸೆಯನ್ನು ಕಂಟ್ರೋಲ್ ಮಾಡುತ್ತದೆ. ಹಾಗಾಗಿ ಇವತ್ತಿನ ಲೇಖನದಲ್ಲಿ ಚಟ್ನಿ ಮಾಡುವುದು ಹೇಗೆ ಎಂದೂ ತಿಳಿಸಿಕೊಡುತ್ತೇವೆ.
ಬೇಕಾಗುವ ಸಾಮಗ್ರಿಗಳು
- ದೊಡ್ಡ ಪತ್ರೆ ಎಲೆ
- ಕರಿಬೇವಿನ ಎಲೆ
- ಪುದಿನ ಸೊಪ್ಪು
- ಕೊತ್ತಂಬರಿ ಸೊಪ್ಪು
ಒಂದು ಮುಷ್ಠಿ ದೊಡ್ಡ ಪತ್ರೆ ಎಲೆ ತೆಗೆದುಕೊಂಡು ನೀರಿನಲ್ಲಿ ತೊಳೆಯಬೇಕು.ದೊಡ್ಡ ಪತ್ರೆ ಎಲೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗು ಕರಿಬೇವಿನ ಎಲೆಯು ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಲ್ಲಿ ರಿಚ್ ಆದ ಐರನ್ ಮಿನರಾಲ್ಸ್ ಇದೆ, ವಿಟಮಿನ್ ಬಿ12 ಇದೆ, ಫೈಬರ್, ಕ್ಯಾಲ್ಸಿಯಂ ಅಂಶ ಇದೆ . ಇದು ಕೂದಲಿಗೂ ಮತ್ತು ಸ್ಕಿನ್ ಗೂ ತುಂಬಾ ಒಳ್ಳೆಯದು.ಡೈಯಬಿಟಿಸ್ ಅನ್ನು ಕಂಟ್ರೋಲ್ ಮಾಡುವ ಗುಣ ಈ ಕರಿಬೇವಿನ ಸೊಪ್ಪಿಗೆ ಇದೆ ಹಾಗು ಕ್ಯಾನ್ಸರ್ ಆಗುವುದನ್ನು ಕೂಡ ಇದು ತಡೆಯುತ್ತದೆ.
ಇನ್ನು ಪುದಿನ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗು ಕೊತ್ತಂಬರಿ ಸೊಪ್ಪು ಕೂಡ ತುಂಬಾ ಒಳ್ಳೆಯದು. ಈ 4 ಸೊಪ್ಪನ್ನು ಒಂದೊಂದು ಮುಷ್ಠಿ ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದನ್ನು ಮಿಕ್ಸಿಗೆ ಹಾಕಿ ಮತ್ತು ರುಚಿಗೆ 2 ಹಸಿ ಮೆಣಸು,1 ಚಮಚ ಜೀರಿಗೆ,1 ಚಮಚ ಉಪ್ಪು ಮತ್ತು ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ನೀರು ಹಾಕದೆ ನಿಟ್ ಆಗಿ ಮಿಕ್ಸ್ ಮಾಡಿಕೊಳ್ಳಿ.ಇದನ್ನು ಅನ್ನದ ಜೊತೆ ರೊಟ್ಟಿ ಜೊತೆ ದೋಸೆ ಜೊತೆಗೆ ಕೂಡ ಸೇವನೆ ಮಾಡಬಹುದು. ಇದರಿಂದ ದೇಹಕ್ಕೆ ಶಕ್ತಿಯನ್ನು ಕೂಡ ಸಿಗುತ್ತದೆ.