ಅತಿಹೆಚ್ಚಿನ ನೀರಿನಂಶ ಇರುವ ಹಣ್ಣು ಎಂದರೆ ಕಲ್ಲಂಗಡಿ ಹಣ್ಣು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ಬಿ6, ವಿಟಮಿನ್ ಸಿ ಪೊಟ್ಯಾಶಿಯಂ ಹಾಗೂ ಮೆಗ್ನೀಷಿಯಂ ಇವೇ. ಸಾಮಾನ್ಯವಾಗಿ ಎಲ್ಲಾರು ಹಣ್ಣನ್ನು ಸೇವಿಸಿ ಬೀಜವನ್ನು ಎಸೆಯುತ್ತಾರೆ.ಅದರೆ ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಆರೋಗ್ಯ ಅಂಶಗಳಿವೆ.ಈ ಬೀಜದಲ್ಲಿ ಇರುವ ಉತ್ತಮ ಪ್ರಮಾಣದ ಮೆಗ್ನೀಷಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೇರವಾಗುತ್ತದೆ.
ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ವೃದ್ಯಪ್ಯಾವನ್ನು ನಿದಾನವಾಗಿಸುತ್ತದೆ. ಮುಖದ ಮೇಲೆ ಇರುವ ಮೊಡವೆಗಳನ್ನು ನೀವಾರಿಸಲು ಈ ಬೀಜದಿಂದ ತೆಗೆದ ಎಣ್ಣೆ ಉತ್ತಮ. ಅಷ್ಟೇ ಅಲ್ಲದೇ ಚರ್ಮದ ಸೂಕ್ಷ್ಮ ರಂದ್ರದಲ್ಲಿ ಇರುವ ಕೊಳೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಎಣ್ಣೆಯಲ್ಲಿ ಇರುವ ಪ್ರೊಟೀನ್ ಮತ್ತು ಅಮೈನೋ ಆಮ್ಲಗಳು ಕೂದಲಿನ ಬುಡವನ್ನು ದೃಢಗೊಳಿಸುತ್ತವೆ.
ಈ ಬೀಜವನ್ನು ಉರಿದು ಪುಡಿ ಮಾಡಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಮೇಲನಿನ್ ಎನ್ನುವ ಬಣ್ಣದ ದ್ರವ್ಯವನ್ನು ಹೆಚ್ಚಿಸಿ ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ. ಇನ್ನು ಮುಕ್ಕಾಲು ಕಪ್ಪು ಬಿಸಿ ನೀರಿಗೆ ಈ ಕಲ್ಲಂಗಡಿ ಬೀಜದ ಪುಡಿಯನ್ನು ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ದೇಹದಲ್ಲಿ ಉರಿಯುತಾ ಮತ್ತು ಬಾವು ಕಡಿಮೆ ಆಗುತ್ತದೆ.