ಕಾಮನ್‌ವೆಲ್ತ್ ಗೇಮ್ಸ್ 2022: 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದ ಭಾರತ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ  2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದೆ.ಕಾಮನ್‌ವೆಲ್ತ್ ಗೇಮ್ಸ್‌ನ 10 ನೇ ದಿನ  ತನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದ ಭಾರತೀಯ ಆಟಗಾರರು ಒಂದರ ಹಿಂದೆ ಒಂದರಂತೆ ಹಲವು ಪದಕಗಳನ್ನು ಗೆದ್ದುಕೊಂಡರು.  ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ  10ನೇ ದಿನದಂದು ನೀತು ಘಂಘಾಸ್, ಅಮಿತ್ ಪಂಘಲ್, ನಿಖತ್ ಜರೀನ್ ಮತ್ತು ಅಲ್ದೌಸ್ ಪಾಲ್ ಎದುರಾಳಿ ಆಟಗಾರರನ್ನು ಸೋಲಿಸಿ ಭಾರತಕ್ಕೆ ಚಿನ್ನದ … Read more

ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ದೀಪಿಕಾ: ಪತ್ನಿಗೆ ಹೀಗೆ ಶುಭಕೋರಿದ ದಿನೇಶ್ ಕಾರ್ತಿಕ್

ಕಾಮನ್‍ ವೆಲ್ತ್‍ ಗೇಮ್ಸ್‍ನಲ್ಲಿ ಭಾರತದ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಕ್ವಾಷ್‌ನಲ್ಲಿ, ಭಾರತದ ಸ್ಟಾರ್ ಆಟಗಾರರಾದ ಸೌರವ್ ಘೋಸಾಲ್ ಮತ್ತು ದೀಪಿಕಾ ಪಲ್ಲಿಕಲ್ ಕಂಚಿನ ಪದಕ ಗೆದ್ದಿದ್ದಾರೆ. ಈ ಪಂದ್ಯದಲ್ಲಿ ಅವರು ಆಸ್ಟ್ರೇಲಿಯನ್ ಜೋಡಿಯನ್ನು ಬಿರುಸಿನ ರೀತಿಯಲ್ಲಿ ಸೋಲಿಸಿದರು. ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೀಪಿಕಾ ಪಳ್ಳಿಕಲ್ ಪದಕ ಗೆದ್ದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಗಿಳಿ ಶಿಳ್ಳೆ ಹೊಡೆದಿದ್ದಕ್ಕೆ ಪೊಲೀಸ್‌ ಠಾಣೆಯಲ್ಲಿ ಕಂಪ್ಲೇಂಟ್!‌ ಸ್ಕ್ವಾಷ್‌ನಲ್ಲಿ ಪದಕ ಗೆದ್ದ ದೀಪಿಕಾ-ಘೋಸಲ್‍ ಸ್ಕ್ವಾಷ್‌ನ ಮಿಶ್ರ ಡಬಲ್ಸ್‌ನಲ್ಲಿ … Read more

CWG 2022 Women Hockey: ಭಾರತೀಯ ವನಿತೆಯರ ಕಮಾಲ್, ಭಾರತಕ್ಕೆ ಮತ್ತೊಂದು ಕಂಚು

CWG 2022 Women Hockey:  ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರ 10 ನೇ ದಿನವಾದ ಇಂದು, ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ಬರೆದಿದೆ. ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಭಾರತ ಮಹಿಳಾ ಹಾಕಿ ತಂಡ 16 ವರ್ಷಗಳ ಬಳಿಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದೆ. ಭಾರತ ಮಹಿಳಾ ಹಾಕಿ … Read more

CWG 2022: ಕಾಮನ್‌ವೆಲ್ತ್‌ನಲ್ಲಿ ಭಾರತೀಯರ ಅಬ್ಬರ: ಪದಕ ಬೇಟೆಯಾಡಿದ ಕ್ರೀಡಾಪಟುಗಳ ವಿವರ ಹೀಗಿದೆ

CWG 2022: ಕಾಮನ್‌ವೆಲ್ತ್‌ನಲ್ಲಿ ಭಾರತೀಯರ ಅಬ್ಬರ: ಪದಕ ಬೇಟೆಯಾಡಿದ ಕ್ರೀಡಾಪಟುಗಳ ವಿವರ ಹೀಗಿದೆ Source link

CWG 2022 : ಆಂಗ್ಲರ ವಿರುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಭರ್ಜರಿ ಗೆಲುವು!

Commonwealth Games 2022 : ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022 ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು  ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಮಹಿಳಾ ಕ್ರಿಕೆಟ್‌ ತಂಡ ಇಂಗ್ಲೆಂಡ್‌ ತಂಡವನ್ನು ಕಾದಾಟದಲ್ಲಿ ಮಣಿಸಿ ಮೊದಲ ಪದಕವನ್ನು ತನ್ನದಾಗಿಸಿಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ 4 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಭಾರತಕ್ಕೆ ರೋಚಕ ಗೆಲುವು ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು … Read more

CWG 2022: ಪ್ಯಾರಾಪವರ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ: ಇತಿಹಾಸ ನಿರ್ಮಿಸಿದ ಸುಧೀರ್

ಪ್ಯಾರಾ ಪವರ್ ಲಿಫ್ಟರ್ ಸುಧೀರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಭಾರತ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 6 ಚಿನ್ನದ ಪದಕಗಳನ್ನು ಹೊಂದಿದೆ. ಸುಧೀರ್ 212 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದರು. ಇದೇ ಮೊದಲ ಬಾರಿಗೆ ಭಾರತ ಈ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಇದನ್ನೂ ಓದಿ: ವರಮಹಾಲಕ್ಷ್ಮೀ ವ್ರತ 2022: ಹಬ್ಬದ ಮಹತ್ವ, ಮುಹೂರ್ತದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಪ್ಯಾರಾ … Read more

Commonwealth ಬಳಿಕ ಇದೀಗ Olympics ನಲ್ಲಿಯೂ ಕೂಡ ಕ್ರಿಕೆಟ್ ಮರುಪ್ರವೇಶ!

Cricket In Olympics:  ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ ಬಹುನಿರೀಕ್ಷಿತ ಮರುಪ್ರವೇಶದ ಸಾಧ್ಯತೆ ಹೆಚ್ಚಾಗತೊಡಗಿದೆ. ಏಕೆಂದರೆ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯುಎಸ್ಎಯ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಂಪಿಕ್ಸ್ನಲ್ಲಿ ಸೇರ್ಪಡೆಗೊಳ್ಳಲು ಬಯಸುವ 9 ಇತರ ಆಟಗಳ ವಿಮರ್ಶೆಯ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಇರಿಸಿದೆ. ಕ್ರಿಕೆಟ್‌ಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಸಿಕ್ಕಿದ್ದು ಒಂದೇ ಬಾರಿ ಎಂಬುದು ಇಲ್ಲಿ ಉಲ್ಲೇಖನೀಯ. 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಆಟಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿತ್ತು. ಆಗ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್ … Read more

CWG 2022:ಭಾರತಕ್ಕೆ ಮತ್ತೊಂದು ಪದಕ: ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಮುರಳಿ ಶ್ರೀಶಂಕರ್

CWG 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರ ಪುರುಷರ ಲಾಂಗ್ ಜಂಪ್‌ನಲ್ಲಿ 8.08 ಮೀ ದೂರ ಹಾರಿದ ಮರಳಿ ಶ್ರೀಶಂಕರ್‌ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ತಮ್ಮ ಐದನೇ ಜಿಗಿತದ ಪ್ರಯತ್ನದ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಇನ್ನು ಬಹಮಾಸ್‌ನ ಲಕ್ವಾನ್ ನಾಯರ್ನ್ ಚಿನ್ನದ ಪದಕ ಗೆದ್ದಿದ್ದಾರೆ. ನಾಯರ್ನ್ ಕೂಡ ಅಂತಿಮ ಹಂತದಲ್ಲಿ 8.08 ಮೀಟರ್‌ ದೂರ ದಾರಿದ್ದರು. ಆದರೆ ತಮ್ಮ ಎರಡನೇ ಅತ್ಯುತ್ತಮವಾಗಿ 7.98 ಮೀಟರ್‌ಗಳಷ್ಟು ದೂರ ಹಾರಿದ್ದರು. ಈ ಪ್ರಯತ್ನದಲ್ಲಿ ಶ್ರೀಶಂಕರ್ 7.84 ಮೀ … Read more

Commonwealth Games 2022 : ಕಾಮನ್‌ವೆಲ್ತ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮಿಂಚಿನ ಬೆಡಗಿ ಹಿಮಾ ದಾಸ್!

Commonwealth Games 2022 : ಭಾರತದ ಸ್ಟಾರ್ ಅಥ್ಲೆಟಿಕ್ ಮಿಂಚಿನ ಬೆಡಗಿ ಹಿಮಾ ದಾಸ್ ಶುಕ್ರವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ 200 ಮೀ ಅನ್ನು 23.42 ಸೆ.ಗಳಲ್ಲಿ ಕ್ರಮಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಹಿಮಾ ದಾಸ್ ಆರಂಭದಿಂದಲೂ ಐವರು ಮಹಿಳಾ ಓಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದರು, ಜಾಂಬಿಯಾದ ರೋಡಾ ನ್ಜೊಬ್ವು 23.85 ಸೆಕೆಂಡ್‌ಗಳಲ್ಲಿ ಎರಡನೇ ಸ್ಥಾನ ಗಳಿಸಿದರೆ, ಉಗಾಂಡಾದ ಜಾಸೆಂಟ್ ನ್ಯಾಮಹುಂಗೆ 24.07 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಅದ್ಭುತ ಪ್ರದರ್ಶನ ನೀಡಿದ ಹಿಮಾ ದಾಸ್  ಹಿಮಾ … Read more

CWG 2022: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಭಾರತ: ಪದಕದ ನಿರೀಕ್ಷೆ ಜೀವಂತ

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಇಲ್ಲಿಯವರೆಗೆ ನಾಲ್ಕು ಪದಕಗಳನ್ನು ಗೆದ್ದಿದೆ. ಭಾರತದ ವೇಟ್‌ಲಿಫ್ಟರ್‌ಗಳು ಅದ್ಭುತ ಆಟ ಪ್ರದರ್ಶಿಸುತ್ತಿದ್ದಾರೆ. ಇದೀಗ ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ದು, ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಮತ್ತೊಂದು ಪದಕ ಬರುವ ಭರವಸೆ ಮೂಡಿದೆ. ಇದನ್ನೂ ಓದಿ: Arecanut today price: ರಾಜ್ಯದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ ಭಾರತ ಬ್ಯಾಡ್ಮಿಂಟನ್ ತಂಡವು ಕಾಮನ್‌ವೆಲ್ತ್ ಗೇಮ್ಸ್‌ನ ಮಿಶ್ರ ತಂಡ ವಿಭಾಗದ ಎ ಗುಂಪಿನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ … Read more