ಮುಖದ ಮೇಲೆ ಆಗುವ ಕಪ್ಪು ಕಲೆಗೆ ಭಂಗು ಎಂದು ಕರೆಯುತ್ತಾರೆ.ಪಿತ್ತ ವೃದ್ಧಿಕರ ಆಹಾರ, ವಿಹಾರ, ವಿಚಾರಗಳು ಮತ್ತು ಉಷ್ಣತೆ ಇರುವ ಪದಾರ್ಥಗಳನ್ನು ಸೇವನೆ ಮಾಡುವುವರಿಗೆ ಈ ರೀತಿಯ ಭಂಗಿನ ಸಮಸ್ಸೆ ಹೆಚ್ಚಾಗಿ ಕಾಡುತ್ತದೆ.ಯಾರು ಹೆಚ್ಚಾಗಿ ಬಿಸಿಲಿಗೆ ಹೋಗುತ್ತಾರೆ ಮತ್ತು ಡ್ರೈ ಸ್ಕಿನ್ ಇರುವವರಿಗೆ, ಕೋಪ ಹೆಚ್ಚಾಗಿ ಇರುವವರಿಗೆ ಭಂಗು ಆಗುವ ಸಾಧ್ಯತೆ ಇರುತ್ತದೆ.ಕೋಪ ತಾಪ ಇರುವವರಿಗೆ ದೇಹದಲ್ಲಿ ಪಿತ್ತ ವೃದ್ಧಿ ಆಗುತ್ತದೆ.ಪಿತ್ತ ವೃದ್ಧಿಕರ ಆಹಾರ ವಿಹಾರವನ್ನು ನಿಲ್ಲಿಸಿದ್ದಾರೆ ಅರ್ಧ ಚಿಕಿತ್ಸೆ ನಿಮಗೆ ಸಿಗುತ್ತದೆ. ನಂತರ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬೇಕು.
ಇದಕ್ಕಿಂತ ಮೊದಲು ಮನೆಮದ್ದು ಬಳಕೆ ಕೂಡ ಮಾಡಬಹುದು.ಮೊದಲು ಎರಡು ಚಮಚ ಅಲೋವೆರಾ ಜೆಲ್, ಎರಡು ಚಮಚ ಎಷ್ಟೆಮ್ ತೈಲ ತೆಗದುಕೊಳ್ಳಿ. ಎಷ್ಟೆಮ್ ಎಣ್ಣೆ ಇಲ್ಲವಾದರೆ ಎರಡು ಚಮಚ ಎಳ್ಳು ಎಣ್ಣೆ, ಎಷ್ಟೆಮ್ ಚೂರಣ ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ ಭಂಗು ಇರುವ ಜಾಗಕ್ಕೆ ಬೆಳಗ್ಗೆ ಹಚ್ಚಿ ಬಿಸಿ ನೀರಿನಿಂದ ಮುಖ ತೊಳೆದುಕೊಳ್ಳಿ.ಈ ರೀತಿ ಮೂರು ಅಥವಾ ನಾಲ್ಕು ತಿಂಗಳು ಮಾಡಿದರೆ ಕ್ರಮೇಣವಾಗಿ ಭಂಗಿನ ಸಮಸ್ಸೆ ಕಡಿಮೆ ಆಗುತ್ತದೆ.